ನಾಲ್ಕರಿಂದ ಆರು ಅಡಿ ಇರುವ ಈ ದೇಹದಲ್ಲಿ ನೋವು ಅಥವಾ ನಲಿವು ಕೇವಲ ಒಂದು ತೀಕ್ಷ್ಣ(ತೀವ್ರ) ಸಂವೇದನೆ. ನಾವು ಯಾವಾಗ ಇದರ ಬಂಧನಕ್ಕೊಳಗಾಗಿಲ್ಲವೋ ಆಗ ನಿಜವಾಗಿ ಅಂದರೆ ಪ್ರಾಮಣಿಕವಾಗಿ "ನಾನು ನಿನಗೆ ಸೇರಿದ್ದೇನೆ" ಎಂದು ಹೇಳಲು ಸಾಧ್ಯವಾಗುತ್ತದೆ. ಆಗಲೇ ನಮ್ಮ ಎಲ್ಲ ತೀವ್ರ ಬಯಕೆಗಳು(cravings) ಮತ್ತು ತೀವ್ರ ಜುಗುಪ್ಸೆ ಮತ್ತು ಸಂಶಯಗಳು ಬಿದ್ದುಹೋಗುತ್ತವೆ, ಮತ್ತು ಒಂದು ಕ್ಷಣದಲ್ಲಿ ಜಗತ್ತು ನಿಮ್ಮದಾಗುತ್ತದೆ. ನಿಮ್ಮ ಎಲ್ಲಾ ಕಷ್ಟಗಳು "ನಾನು, ನಾನು, ನಾನು......"," ನನಗೆ ಇದು ಬೇಕು, ನನಗೆ ಇದು ಇಷ್ಟ, ನನಗೆ ಇದು ಇಷ್ಟವಿಲ್ಲ..." ಇವುಗಳೊಂದಿಗ ಇರುತ್ತೇನೆ. ಅದನ್ನು ಬಿಟ್ಟುಬಿಡಿ. ಸೂರ್ಯ ಉದಯಿಸುತ್ತಾನೆ, ಮತ್ತು ಮುಳುಗುತ್ತಾನೆ, ಹುಲ್ಲು ಬೆಳೆಯುತ್ತದೆ, ನದಿ ಹರಿಯುತ್ತದೆ, ಚಂದ್ರ ಪ್ರಕಾಶಿಸುತ್ತಾನೆ ಮತ್ತು ನಾನು ಯವಾಗಲೂ ಇಲ್ಲಿದ್ದೇನೆ.
ಪ್ರಶ್ನೆ : ಯಾರಾದರೂ ನಿಮ್ಮನ್ನು ಹೊಗಳಿದರೆ ನಿಮಗೆ ಹೇಗೆನ್ನಿಸುತ್ತದೆ?
ಶ್ರೀ ಶ್ರೀ : ನಾಚಿಕೆ, ಸಂತೋಷ, ಹಿರಿಮೆ, ಕಸಿವಿಸಿ. ಇದು ನಿಮಗೆ ಏನನ್ನೋ ಉಂಟುಮಾಡುತ್ತದೆ ಅಲ್ಲವೆ? ಇದು ನನಗೆ ಏನೂ ಮಾಡುವಿದಿಲ್ಲ! ಚಂದ್ರ, ಪರ್ವತ, ಸರೋವರ. ಕಪ್ಪು ಅರಣ್ಯ ಇವುಗಳನ್ನು ನೀವು ಹೊಗಳಿದಾಗ, ಅದು ಇವುಗಳಿಗೆ ಏನನ್ನೂ ಉಂಟುಮಾಡುವುದಿಲ್ಲ. ಅವುಗಳು ಹಾಗೆಯೇ ಇರುತ್ತವೆ.
ಅದೇ ರೀತಿ ನಾನು ಪ್ರಕೃತಿಯ ಒಂದು ಭಾಗ. ನಿಮಗೆ ನನ್ನನ್ನು ಹೊಗಳುವುದರಿಂದ ಸಂತೋಷವಾದರೆ ನೀವು ಹಾಗೆ ಮಾಡಬಹುದು. ನಿಜ ಹೇಳಬೇಕೆಂದರೆ ನಿಮಗೆ ಬೇರೆ ವಿಧಿಯಿಲ್ಲ(ನಗು)
ನಿಮ್ಮೊಡನೆ ನೀವು ಏನು ಬೇಕಾದರೂ ಮಾಡಬಹುದು. ನಾನು ನಿಮಗಾಗಿ ಇದ್ದೇನೆ. ನಾನು ನಿಮ್ಮ ಕೈಗೊಂಬೆ(ನಗು)!