ಒಂದು ಹೇಳಿಕೆ ಇದೆ. " ನಾನು ಚಿಕ್ಕವನಲ್ಲ ; ಪ್ರಪಂಚ ಬಹಳ ದೊಡ್ಡದಾಗಿದೆ"
ನಮ್ಮಲ್ಲಿ ಬಹಳಷ್ಟು ಜನ ಮಕ್ಕಳಾಗಿದ್ದಾಗ ತಂದೆಯ ಭುಜದ ಎತ್ತರಕ್ಕೆ ನಿಲ್ಲುವ ಸಲುವಾಗಿ ಉದ್ದದ ಕಂಬಿಗಳ ಮೇಲೆ ಜೋತಾಡಿ ಅಥವಾ ಗಂಟೆಗಟ್ಟಲೆ ಸೈಕಲ್ಲನ್ನು ತುಳಿದು ಎತ್ತರವಾಗಲು ಪ್ರಯತ್ನವನ್ನು ಮಾಡಿ ಸೋತಿದ್ದೇವೆ. ನಮ್ಮ ಎತ್ತರವು ಎರಡು ಇಂಚು ಹೆಚ್ಚಿದರೆ ಅದು ನಮ್ಮ ಜೀವನದ ಬಗ್ಗೆ ಇತರರ ದೃಷ್ಟಿಕೋನದ ಮೇಲೆ ಮತ್ತು ನಮ್ಮ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಬಹುದು ಎಂದು ನಾವು ತಿಳಿದುಕೊಂಡಿದ್ದೇವೆ.
ಒಳ್ಳೆಯ ಎತ್ತರವು ಶಾರೀರಿಕ ಅಂಶಕ್ಕೆ ಮಾತ್ರವಲ್ಲದೇ ಬುದ್ಧಿಶಕ್ತಿ, ಉತ್ತಮ ಉದ್ಯೋಗಾವಕಾಶ ಹಾಗೂ ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನಕ್ಕೂ ಸಂಬಂಧಿಸಿದೆ ಎಂದು ಇತ್ತೀಚಿನ ಅಧ್ಯಯನವು ತೋರಿಸಿದೆ.
ಬ್ರಿಟನ್ನಿನಲ್ಲಿ ಮಾಡಿದ ಇನ್ನೊಂದು ಸಂಶೋಧನೆಯಲ್ಲಿ ಹೆತ್ತವರ ಎತ್ತರವು ಮುಖ್ಯ ಕಾರಣವಾಗಿದ್ದರೂ ಸಹ, ಒಳ್ಳೆಯ ಎತ್ತರ ಕೇವಲ ಅನುವಂಶಿಕವಲ್ಲ, ನಾವು ತಿನ್ನುವ ಆಹಾರ, ಜೀವನಶೈಲಿ ಹಾಗೂ ಯೋಚನಾಲಹರಿಯನ್ನೂ ಅವಲಂಬಿಸಿದೆ ಎಂದು ಕಂಡುಹಿಡಿದಿದ್ದಾರೆ. ಆದರೆ, ಎತ್ತರದ ಬೆಳವಣಿಗೆಯು ಅಷ್ಟು ಸುಲಭವಲ್ಲ.
ಆಧುನಿಕ ಸೌಂದರ್ಯವರ್ಧಕ ಶಾಸ್ತ್ರ ಹಾಗೂ ಇತರ ವೈವಿಧ್ಯಮಯ ವಿಧಾನಗಳನ್ನು ನೀವು ಬಯಸದಿದ್ದರೆ, ನಮ್ಮ ಪ್ರಾಚೀನ ಪದ್ಧತಿಯು ನಿಮ್ಮ ಸಹಾಯಕ್ಕೆ ಬರಬಹುದು.
ನಿಮ್ಮ ಎತ್ತರದ ಬೆಳವಣಿಗೆಗಾಗಿ ಯೋಗ:
ಭಾರತದ ಈ ಪ್ರಾಚೀನ ವಿಧಾನವು ನಿಮ್ಮ ಬೆಳವಣಿಗೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರಳ ಹಾಗೂ ನಿರಾಯಾಸವಾದ ಉತ್ತರವಾಗಿದೆ. ಆಶ್ಚರ್ಯವೇ? ಆಶ್ಚರ್ಯ ಪಡಬೇಡಿ.
ಶರೀರ ಮತ್ತು ಮನಸ್ಸುಗಳ ಸಂಗಮಕ್ಕೆ ಯೋಗ ಎಂದರ್ಥ. ಇದು ಆರೋಗ್ಯಕರ ಜೀವನಕ್ಕೆ ಬಹಳ ಸುಲಭವಾದ ಹಾಗೂ ಪ್ರಭಾವಶಾಲಿಯಾದ ಮಾರ್ಗ. ಇದು ಶಾಂತವಾದ ಮನಸ್ಸನ್ನು ಹೊಂದಲು ಹಾಗೂ ಶರೀರದ ಕಲ್ಮಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ವಿಭಿನ್ನ ಭಂಗಿಗಳಲ್ಲಿ ಶರೀರದ ವಿವಿಧ ಭಾಗಗಳಿಗೆ ಉಸಿರಿನ ಸಹಾಯದಿಂದ ಅರಿವನ್ನು ತೆಗೆದುಕೊಂಡು ಹೋಗುವ ಮೂಲಕ ಯೋಗವನ್ನು ಅಭ್ಯಾಸ ಮಾಡಲಾಗುತ್ತದೆ. ಇದು ರಕ್ತ ಸಂಚಲನವನ್ನು ವೃದ್ಧಿಸುತ್ತದೆ ಹಾಗೂ ಶರೀರದ ಅಂಗಾಂಗಗಳ ಆರೋಗ್ಯವನ್ನೂ ಸುಧಾರಿಸುತ್ತದೆ.
ಮನಸ್ಸು ಯಾವುದೇ ಒತ್ತಡವಿಲ್ಲದೆ ಪ್ರಶಾಂತವಾಗಿದ್ದಾಗ, ದೇಹವು ಬೆಳವಣಿಗೆಗೆ ಸಂಬಂಧಿಸಿದ ಹಾರ್ಮೋನುಗಳನ್ನು ಸುಲಭವಾಗಿ ಉತ್ಪಾದಿಸಬಹುದು. ಉತ್ತಮವಾದ ಸೌಷ್ಠವವನ್ನು ಹೊಂದುವುದು ಕೂಡ ಮುಖ್ಯ ಮತ್ತು ಯೋಗದ ಮೂಲಕ ಇದನ್ನು ಸಾಧಿಸಬಹುದು.
'ಶ್ರೀ ಶ್ರೀ ಯೋಗ' ಶಿಬಿರವು ಐದು ದಿನಗಳ ಕಾಲ ನಡೆಯುವ ಸ್ವಾಸ್ಥ್ಯ ಶಿಬಿರವಾಗಿದ್ದು ಇದು ಯೋಗಾಸನಗಳ ಮೂಲಕ ಮನಸ್ಸನ್ನು ಉಲ್ಲಸಿತಗೊಳಿಸಿ ದೇಹವನ್ನು ಪುನಶ್ಚೇತನಗೊಳಿಸುತ್ತದೆ. ಕೆಲವು ನಿಮಿಷಗಳ ಯೋಗದ ನಿಯತವಾದ ಅಭ್ಯಾಸವು ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಶಾಂತಿಯನ್ನು ಪಡೆಯಲು ಸಹಾಯಕ. ನಿಮ್ಮ ಎತ್ತರವನ್ನು ಹೆಚ್ಚಿಸಲು ಸಹಾಯವಾಗುವ ಕೆಲವು ಆಸನಗಳನ್ನು ಅವಲೋಕಿಸೋಣ:
1. ಭುಜಂಗಾಸನ: ( ನಾಗರಹಾವಿನ ಭಂಗಿ )
ಭುಜಂಗಾಸನವು ಭುಜ, ಎದೆ ಮತ್ತು ಕಿಬ್ಬೊಟ್ಟೆಯ ಭಾಗದ ಮಾಂಸಖಂಡಗಳನ್ನು ವಿಸ್ತರಿಸುವುದು. ಇದು ಉತ್ತಮವಾದ ನಿಲುವನ್ನು ಸಾಧಿಸುವುದರ ಮೂಲಕ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವುದು..
2. ತಾಡಾಸನ ( ಮರದ ಭಂಗಿ )
ಈ ಭಂಗಿಯು ಬೆನ್ನು ಮೂಳೆಯನ್ನು ನೇರವಾಗಿಸಾಲು ಮತ್ತು ಉದ್ದವಾಗಿಸಲು, ಆ ಮೂಲಕ ನಿಮ್ಮ ಎತ್ತರವನ್ನು ಹೆಚ್ಚಿಸಲು ಸೂಕ್ತವಾದ ಆಸನ.
3. ನಟರಾಜಾಸನ
ಈ ಭಂಗಿಯು ಶ್ವಾಸಕೋಶ ಮತ್ತು ಎದೆಯನ್ನು ಹಿಗ್ಗಿಸಿ, ಪೃಷ್ಠ , ಕಾಲುಗಳು, ಮೀನುಖಂಡ, ಮಣಿಕಟ್ಟು, ತೋಳುಗಳು ಮತ್ತು ಬೆನ್ನು ಮೂಳೆಗಳ ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ.
4. ಸೂರ್ಯ ನಮಸ್ಕಾರ
ಸೂರ್ಯ ನಮಸ್ಕಾರದಲ್ಲಿನ ಚಕ್ರಗತಿಯ ಯೋಗಾಸನಗಳ ಅಭ್ಯಾಸದಿಂದ ಬಹುಬೇಗ ಕೀಲುಗಳು ಮತ್ತು ಮಾಂಸಖಂಡಗಳು ಸಡಿಲವಾಗುತ್ತವೆ. ಕಿಬ್ಬೊಟ್ಟೆಯ ಅಂಗಗಳನ್ನು ಹಿಗ್ಗಿಸುವುದು ಮತ್ತು ಕುಗ್ಗಿಸುವುದರಿಂದ ಈ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುವುವು. ಹಿಂದೆ ಮತ್ತು ಮುಂದೆ ಬಗ್ಗುವ ಭಂಗಿಗಳು ಬೆನ್ನಿಗೆ ಸಹಾಯಕ. ಸೂರ್ಯ ನಮಸ್ಕಾರವು ಬೆನ್ನು ಮೂಳೆಯನ್ನು ಬಲಿಷ್ಠಗೊಳಿಸಿ ರೋಗನಿರೋಧತೆಯನ್ನು ಸುಧಾರಿಸುತ್ತದೆ.
ಶರೀರದ ಬೆಳವಣಿಗೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಮತ್ತು ಹಲವಾರು ಕಾರಣಗಳನ್ನು ಅವಲಂಬಿಸಿರುತ್ತದೆ. ಯೋಗಾಭ್ಯಾಸವು ನಿಮ್ಮ ಶರೀರವನ್ನು ನಯಗೊಳಿಸಿ ಎತ್ತರ ಹೆಚ್ಚಿಸುವಲ್ಲಿ ಖಂಡಿತವಾಗಿಯೂ ಸಹಾಯಕವಾಗುತ್ತದೆ ಆದರೆ ದೇಹಕ್ಕೆ ಬೇಕಾದ ಪೌಷ್ಠಿಕಾಂಶದ ಕಡೆಗೂ ನಾವು ಗಮನಹರಿಸಬೇಕು. ನಿಯತವಾದ ಯೋಗಾಭ್ಯಾಸದಿಂದ ಉತ್ತಮ ಶರೀರ ಮತ್ತು ಮನಸ್ಸನ್ನು ಹೊಂದುವುದರೊಂದಿಗೆ ಒಳ್ಳೆಯ ಆಹಾರಪದ್ಧತಿಯು ದೇಹದಲ್ಲಿ ಚೈತನ್ಯವನ್ನು ಕಾಪಾಡಿಕೊಳ್ಳಲು ಸಹಾಯಕ.
ಯೋಗಾಭ್ಯಾಸವು ಒಂದು ಕಲೆ. ಇದನ್ನು ನಿಯತವಾಗಿ ಅಭ್ಯಾಸ ಮಾಡಿದರೆ ಚಮತ್ಕಾರಿಕ ಪರಿಣಾಮಗಳನ್ನು ಪಡೆಯಬಹುದು. ಯೋಗಾಸನಗಳನ್ನು ಅರ್ಹರಾದ ಪರಿಣತರ ಮಾರ್ಗದರ್ಶನದಲ್ಲಿ ಸರಿಯಾದ ರೀತಿಯಲ್ಲಿ ಕಲಿಯಬೇಕು.
ಶ್ರೀ ಶ್ರೀ ಯೋಗದ ಶಿಬಿರದಲ್ಲಿ ತರಬೇತಿ ಹೊಂದಿದ ಪರಿಣತ ಶಿಕ್ಷಕರು ಯೋಗಾಸನಗಳನ್ನು ಅಭ್ಯಾಸ ಮಾಡಿಸುತ್ತಾರೆ. ಇದು ನಿಮ್ಮ ದೇಹದಲ್ಲಿ ಸಂಗ್ರಹವಾದ ಎಲ್ಲ ಒತ್ತಡವನ್ನು ಹೊರಹಾಕುತ್ತದೆ. ನಿಮ್ಮ ಜೀವನಶೈಲಿ ಹಾಗೂ ಶರೀರಕ್ಕೆ ಸೂಕ್ತವಾದ ಯೋಗಾಭ್ಯಾಸದ ದಿನಚರಿಯನ್ನು ಆಯ್ಕೆ ಮಾಡಿಕೊಳ್ಳಲು ಶ್ರೀ ಶ್ರೀ ಯೋಗದ ಶಿಕ್ಷಕರು ನಿಮಗೆ ಸಹಾಯ ಮಾಡುತ್ತಾರೆ.