ಸಹಪಾಠಿಗಳಿಂದ ತೀವ್ರ ಒತ್ತಡ. ಜೊತೆಗೆ ಶಾಲಾ ಪರೀಕ್ಷೆಗಳು, ಪೋಷಕರು, ಸಂಬಂಧಗಳು, ಕ್ರೀಡೆಗಳು, ಪ್ರವೇಶ ಪರೀಕ್ಷೆಗಳು. ಇವೆಲ್ಲವನ್ನೂ ನೀವು ಹೇಗೆ ಸಮರ್ಥವಾಗಿ ನಿಭಾಯಿಸುವಿರಿ? ಈ ಕಾರ್ಯಕ್ರಮವು ನಿಮ್ಮನ್ನು ಸರಳವಾದ ಯೋಗಾಸನಗಳ ಮೂಲಕ ಶಾರೀರಿಕವಾಗಿ , ಉಸಿರಾಟದ ಪ್ರಕ್ರಿಯೆಗಳನ್ನೊಳಗೊಂಡ ಸುದರ್ಶನ ಕ್ರಿಯೆಯ ಮೂಲಕ ಮಾನಸಿಕ ಮತ್ತು ಭಾವನಾತ್ಮಕವಾಗಿ ಸಶಕ್ತಗೊಳಿಸುತ್ತದೆ.
ವಿನೋದಮಯ ತಂಡ ಕ್ರೀಡೆಗಳು, ಪರಸ್ಪರ ಸಂವಹನ ಪ್ರಕ್ರಿಯೆಗಳು ಮತ್ತು ಗುಂಪು ಚರ್ಚೆ ಹಾಗೂ ಸಮಾಲೋಚನೆಗಳ ಮೂಲಕ ನಿಮ್ಮ ಜೀವನವನ್ನು ಬಾಧಿಸುವ ಸಮಸ್ಯೆಗಳಾದ ಸ್ನೇಹ ಮತ್ತು ಸಂಬಂಧಗಳ ನಿರ್ವಹಣೆ, ಓದಿನಲ್ಲಿ ಹೆಚ್ಚಿನ ಏಕಾಗ್ರತೆಯನ್ನು ಸಾಧಿಸುವ ಬಗೆ, ನಿಮ್ಮ ಸಂಪೂರ್ಣವಾದ ಸಾಮರ್ಥ್ಯವನ್ನು ಹೊರತರುವ ಸೂತ್ರಗಳನ್ನು ಕಲಿಯಿರಿ.
ಸುದರ್ಶನ ಕ್ರಿಯೆಯ ಮೂಲಕ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪಡೆಯಿರಿ. ಭಯ ಮತ್ತು ಸಭಾಕಂಪನದಿಂದ ಹೊರಬರಲು ಸರಳವಾದ ತಂತ್ರಗಳನ್ನು ಕಲಿಯಿರಿ. ನಿಮ್ಮನ್ನು ನೀವು ಪ್ರೀತಿಸಲು, ಇತರರೊಂದಿಗೆ ಹಂಚಿಕೊಳ್ಳಲು, ಸಮಸ್ಯೆಗಳನ್ನು ಸಿಡಿಮಿಡಿಗೊಳ್ಳದೇ ನಗುವಿನೊಂದಿಗೆ ಎದುರಿಸಲು ಕಲಿತುಕೊಳ್ಳಿ. ಬನ್ನಿ, ಈ ಜಗತ್ತನ್ನು ವಿಭಿನ್ನವಾದ ದೃಷ್ಟಿಕೋನದಿಂದ ನೋಡಿ.