ನಾಸ್ತಿಕತೆ ಎಂದರೆ ಜೀವನದ ವಾತ್ಸಲ್ಯದ ಬಗ್ಗೆಯಾಗಲಿ ಅಥವಾ ಕಾಣದ ದೈವದ ಬಗ್ಗೆಯಾಗಲಿ ನಂಬಿಕೆ ಇಲ್ಲದಿರುವಾಗ ಉಂಟಾಗುವುದು. ಒಬ್ಬ ನಾಸ್ತಿಕನು ಗುರುವಿನ ಬಳಿಗೆ ಬಂದಾಗ ಏನಾಗುತ್ತದೆ? ನೀವು ನಿಮ್ಮ ಅಸ್ತಿತ್ವದ ಬಗ್ಗೆ ತಿಳಿಯಲು ಪ್ರಾರಂಭಿಸುತ್ತೀರಿ ಮತ್ತು ಈ ಶರೀರದಿಂದಾಚೆ ಇರುವ ನಿಮ್ಮ ನಿರಾಕಾರ ರೂಪವಾದ ಟೊಳ್ಳು ಮತ್ತು ಖಾಲಿತನವನ್ನು ಅನುಭವಿಸುತ್ತೀರಿ. ನಿಮಗೆ ಗೋಚರವಾಗದಿರುವ ನಿಮ್ಮಲ್ಲಿರುವ ಆ ನಿರಾಕಾರ ಸ್ವರೂಪವು ಹೆಚ್ಚು ಹೆಚ್ಚಾಗಿ ಧೃಡವಾಗುತ್ತಾ ಬರುತ್ತದೆ. ಗುರುವು ಆ ನಿಮ್ಮ ನಿರಾಕಾರ ನಿಜವಾದದ್ದು ಮತ್ತು ನಿಮಗೆ ಗೋಚರವಾಗಿತ್ತಿರುವುದು ಈ ಶರೀರವಲ್ಲ ಎಂದು ಮನವರಿಕೆಮಾಡಿಕೊಡುತ್ತರೆ. ನಿಮ್ಮಲ್ಲಿ ಸೂಕ್ಷ್ಮತೆ ಮತ್ತು ಪ್ರತಿಸ್ಪಂದಿಸುವಿಕೆ ಉದಯಿಸುತ್ತದೆ. ಸ್ರುಷ್ಟಿಯ ಎಲ್ಲ ಆಕಾರಗಳಲ್ಲಿಯೂ ಆ ನಿರಾಕಾರದ ಶಕ್ತಿಯು ಕಾಣತೊಡಗುತ್ತದೆ ಮತ್ತು ಜೀವನದ ನಿಗೂಢತೆ ಆಳವಾಗತೊಡಗುತ್ತದೆ. ಆಗ ನಮ್ಮ ಪ್ರಯಾಣ ಪ್ರಾರಂಭವಾಗುತ್ತದೆ. ಮತ್ತೆ ಅದರಲ್ಲಿ 4 ಹಂತಗಳಿವೆ..
ಮೊದಲನೆಯ ಹಂತ - ಸಾರೂಪ್ಯ(ನಿರಾಕಾರವನ್ನು ಸಾಕಾರದಲ್ಲಿ ನೋಡುವುದು).ದೇವರನ್ನು ಎಲ್ಲ ರೂಪ, ಆಕಾರಗಳಲ್ಲಿ ನೋಡುವುದು. ಕೆಲವರಿಗೆ ದೇವರನ್ನು ನಿರಾಕಾರ ಸ್ವರೂಪದಲ್ಲಿ ನೋಡುವುದು ಅನುಕೂಲಕರವಾಗಿ ತೋರುತ್ತದೆ. ಏಕೆಂದರೆ ಅವನನ್ನು ಸಾಕಾರರೂಪದಲ್ಲಿ ನೋಡಿದಾಗ ಅವನ ಮತ್ತು ತಮ್ಮ ನಡುವಿನ ಬೇಧವನ್ನು ಗುರುತಿಸಿ, ತಾನು ಬೇರೆ ಅವನು ಬೇರೆ ಎನ್ನುವ ದ್ವೈತ ಭಾವ ಉಂಟಾಗುತ್ತದೆ ಮತ್ತು ಅಲ್ಲಿ ತನ್ನ ನಿರಾಕರಣೆಯ ಭಯವೂ ಕಾಡಬಹುದು. ಗಾಢನಿದ್ರೆ ಮತ್ತು ಸಮಾಧಿ ಸ್ಥಿಥಿಯನ್ನು ಬಿಟ್ಟರೆ ನಮ್ಮ ಜೀವನದಲ್ಲಿ ನಮ್ಮ ಎಲ್ಲ ರೀತಿಯ ಪ್ರಶ್ನೋತ್ತರಗಳು ಕೇವಲ ಆ ಸಾಕಾರರೂಪದೊಡನೆ ಮಾತ್ರ. ನೀವು ದೇವರನ್ನು ಸಾಕಾರ ರೂಪದಲ್ಲಿ ನೋಡದಿದ್ದರೆ, ನಿಮ್ಮ ಜೀವನದ ಜಾಗೃತ ಅವಸ್ಥೆಯ ಭಾಗವು ದೈವತ್ವರಹಿತವಾಗಿ ಅಪೂರ್ಣವೆನಿಸುತ್ತದೆ. ಯಾರು ದೇವರನ್ನು ನಿರಾಕಾರ ಸ್ವರೂಪವೆಂದು ತಿಳಿಯುತ್ತರೋ ಅವರು ಚಿಹ್ನೆಗಳನ್ನು ಉಪಯೋಗಿಸುತ್ತರೆ, ಮತ್ತು ದೇವರಿಗಿಂತ ಹೆಚ್ಚಾಗಿ ಆ ಚಿಹ್ನೆಗಳನ್ನು ಪ್ರೀತಿಸುತ್ತಾರೆ. ದೇವರೇ ಸ್ವತಃ ಬಂದು ಒಬ್ಬ ಕ್ರೈಸ್ತನಿಗೆ 'ಕ್ರಾಸ್' ಬಿಡಲು ಅಥವಾ ಮುಸ್ಲಿಮನಿಗೆ 'ಚಂದ್ರ' ನ ಚಿಹ್ನೆಯನ್ನು ಬಿಡಲು ಹೇಳಿದಾಗ ಅವರು ಬಿಡುವುದಿಲ್ಲ. ನಿರಾಕಾರದ ಸ್ವರೂಪದ ಆರಾಧನೆಯು, ಸಾಕಾರ ರೂಪಯಿಂದಲೇ ಸಾಧ್ಯ
ಎರಡನೆಯ ಹಂತ - ಸಾಮೀಪ್ಯ(ಹತ್ತಿರವಾಗುವುದು)
ನೀವು ಆರಿಸಿಕೊಂಡಿರುವ ನಿಮ್ಮ ಇಷ್ಟದೇವರ ಸಾಕಾರರೂಪದೊಡನೆ ಅತ್ಯಂತ ನಿಕಟ ಸಾಮೀಪ್ಯವನ್ನು ಭಾವಿಸಿಕೊಂಡು ನೀವು ಅವನ ನಿರಾಕಾರ ಸ್ವರೂಪವನ್ನು ತಲುಪುವುದರಲ್ಲಿದ್ದೀರಿ. ಇದು ಸೃಷ್ಟಿಯೊಡನೆ ಒಂದು ರೀತಿ ನಿಕಟ ಬಾಂಧವ್ಯಕ್ಕೆ ಒಯ್ಯುತ್ತಿವೆ. ಈ ಹಂತದಲ್ಲಿ ಒಬ್ಬ ಸಾಧಕನು ನಿರಾಕರಣೆ ಮತ್ತು ಬೇರೆ ರೀತಿಯ ಭಯಗಳಿಂದ ಮುಕ್ತನಾಗುತ್ತಾನೆ. ಆದರೆ ಇದು ದೇಶ ಮತ್ತು ಕಾಲಗಳ ಪರಿಧಿಗೆ ಒಳಪಟ್ಟಿದೆ.
ಮೂರನೆಯ ಹಂತ ಸಾನಿಧ್ಯ - ದೇವರ ಇರುವಿಕೆಯನ್ನು (ಸನ್ನಿಧಾನ - ಸಾನಿಧ್ಯವನ್ನು) ಅನುಭವಿಸುತ್ತಾ ನೀವು ದೇಶ ಮತ್ತು ಕಾಲಗಳ ಪರಿಧಿಯನ್ನು ದಾಟುತ್ತೀರಿ.
ನಂತರ ಕಡೆಯ ಹಂತ - ನೀವು ಪೂರ್ಣವಾಗಿ ಭಗವಂತನಲ್ಲಿ ಒಂದಾಗಿ ಅವನಲ್ಲಿಯೇ ಮುಳುಗಿ ಹೋದಾಗ(ಕರಗಿಹೋದಾಗ) ಆಗುವುದು. ಆಗ ನೀವು ದೈವದೊಡನೆ ನಿಮ್ಮ ಏಕತ್ವವನ್ನು ತಿಳಿಯುತ್ತೀರಿ.ನಿಮ್ಮ ಇಷ್ಟದೈವದೊಡನೆ ಪೂರ್ತಿಯಾಗಿ ಬೆರೆತಾಗ, ನಾನು ಬೇರೆ ದೇವರು ಬೇರೆ ಎಂಬ ದ್ವೈತ ಭಾವ ದೂರವಾಗುತ್ತದೆ.
ಇದೇ ಅದು ಮತ್ತು ಅದೇ ಇದು.
ವಿನೋದ್ - ಒಬ್ಬ ಆಸ್ತಿಕನೂ ಕೂಡ ಈ ನಾಲ್ಕೂ ಹಂತಗಳಲ್ಲಿಯೂ ಕ್ರಮಿಸಬೇಕಾಗುತ್ತದೆಯೇ ?
ಶ್ರೀ ಶ್ರೀ : ಒಬ್ಬ ನಾಸ್ತಿಕನಾಗಲಿ ಅಥವಾ ಆಸ್ತಿಕನಾಗಲಿ, ಅವನು ಈ ನಾಲ್ಕೂ ಹಂತಗಳಲ್ಲಿ ನಡೆಯುತ್ತಾನೆ
ಜ್ನಾನವೇ ಶಕ್ತಿಯಾದಾಗ ಅಸಾಧ್ಯವಾದುದೂ ಕೂಡ ಸಾಧ್ಯವಾಗುತ್ತದೆ.
ಬೆಂಗಳೂರಿನಲ್ಲಿ ಶ್ರೀ ಶ್ರೀ ರವಿಶಂಕರ್ ಮತ್ತು ದಲೈಲಾಮರವರು 1,50,000 ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡುವಂತಹ ದೊಡ್ಡ ಸಭೆಯೂ ಕೂಡ ಕೇವಲ 4 ದಿನಗಳ ಅವಧಿಯಲ್ಲಿ ಆಯೋಜಿಸಲ್ಪಟ್ಟಿತು. ಆ ಸತ್ಸಂಗವು ಒಂದು ಚಾರಿತ್ರಿಕ ಕ್ಷಣ. ಬೌದ್ಧ ಸನ್ಯಾಸಿಗಳು ಮತ್ತು ವೇದ ಪಂಡಿತರು ಮಂತ್ರೋಚ್ಛಾರಣೆ ಮಾಡಿದರು - ಧ್ಯಾನದ ನಿಶ್ಚಲತೆಯಿಂದ ಶುರುವಾದದ್ದು ಬೆಳಗಿದ ಮೇಣದ ಬತ್ತಿಗಳೊಂದಿಗೆ ಹಾಡು ಮತ್ತು ನೃತ್ಯದೊಡನೆ ಸಂಭ್ರಮಾಚರಣೆಯೊಂದಿಗೆ ಬೆರೆಯಿತು.