ನಿಮ್ಮ ದೇಹವು ಪ್ರಕೃತಿಮಾತೆಯಿಂದ ಕೊಡಲ್ಪಟ್ಟಿರುವ ಒಂದು ಅಮೂಲ್ಯವಾದ ಕೊಡುಗೆ. ನಿಮ್ಮ ಶರೀರವನ್ನು ಗೌರವಿಸಿ. ನಿಮ್ಮ ದೇಹವು ದೇವರನ್ನು ಆಹ್ವಾನಿಸಬಹುದು. ದೈವತ್ವವು ನಿಮ್ಮ ದೇಹವೆಂಬ ದೇಗುಲವನ್ನು ಪ್ರವೇಶಿಸಿ ಅಲ್ಲಿ ನಿವಾಸಮಾಡಬಹುದು. ಆದ್ದರಿಂದ ಅದನ್ನು ಪರಿಶುದ್ಧವಾಗಿಡಿ, ಪರಿವರ್ತಿಸಿ ಮತ್ತು ಅದರಲ್ಲಿ ಒಂದು ಜ್ಯೋತಿಯನ್ನು ಬೆಳಗಿಸಿ. ನೀವು ಇಷ್ಟು ಮಾಡಿದರೆ ಸಾಕು, ದೈವತ್ವವು ನಿಮ್ಮಲ್ಲಿ ನೆಲೆಸಬಹುದು.
ದೇಹವು ದೈವದ ಅತಿ ಉತ್ತಮವಾದ ನೆಲೆ
ನಿಮ್ಮ ದೇಹದಲ್ಲಿ ಏನಿದೆ? ಅದು ದೈವದ ಒಂದು ಪವಿತ್ರವಾದ ಸ್ಥಾನ. ಆ ಸ್ಥಾನದಲ್ಲಿ ನಗುವಿನೊಂದಿಗೆ ಜ್ಞಾನದ ದೀವಿಗೆಯನ್ನು ಹಚ್ಚಿ ಆನಂದ ಕಂದನನ್ನು ಆಹ್ವಾನಿಸಿ. ಆ ನಂದನಕಂದನು ನಿಮ್ಮ ನೆಲೆಗೆ ಬರಬೇಕಾದಲ್ಲಿ ಜ್ಞಾನದ ಬೆಳಕಿನ ಅವಶ್ಯಕಥೆಯಿದೆ, ನಗುವಿನ ಅವಶ್ಯಕಥೆಯಿದೆ..