ಯೋಗ ಭಂಗಿಗಳ ಪರಿಣಾಮವನ್ನು ಯೋಗನಿದ್ರೆಯಲ್ಲಿ ಅನುಭವಿಸಿ.
ಯೋಗಾಭ್ಯಾಸ ಮಾಡಿದ ಮೇಲೆ ನೀವೇನು ಮಾಡುತ್ತೀರಿ? ಕಿಟಕಿಯಿಂದ ಹೊರಗೆ ನೋಡುತ್ತಿರೋ, ಮುಂದಿನ ಕೆಲಸದ ಬಗ್ಗೆ ಯೋಚಿಸುತ್ತಿರೋ ಅಥವ ಹಣ್ಣಿನ ರಸವನು ಸೇವಿಸುತ್ತಿರೋ ನಿಮ್ಮನ್ನು ನೀವೆ ವಿಚಾರಿಸಿ.
ಹೆಚ್ಚಿನ ಜನರು ಯೋಗ ಎಂದರೆ ಶರೀರದ ಕಸರತ್ತು ಎಂದು ತಿಳಿದು ಕೊಂಡಿರುತ್ತಾರೆ. ಆದರೆ ಯೋಗವು ನಮ್ಮ ಶರೀರಕ್ಕೆ ಮತ್ತು ಮನಸ್ಸಿಗೆ ಹಿತವಾದ ನೆಮ್ಮದಿಯನ್ನು ಒದಗಿಸುತ್ತದೆ. ಯೋಗಾಭ್ಯಾಸವನ್ನು ಹೆಚ್ಚು ಪರಿಣಾಮಕಾರಿ ಮಾಡಲು ಯೋಗದ ಕೊನೆಯಲ್ಲಿ ಯೋಗನಿದ್ರೆಯನ್ನು ಅಳವಡಿಸಿಕೊಳ್ಳುವುದು ಉತ್ತಮ.
ಕಾರನ್ನು ತುಂಬಾ ದೂರ ಓಡಿಸಿದ ನಂತರ ಇಂಜಿನನ್ನು ತಣ್ಣಾಗಾಗಿಸಲು ನಾವು ಸ್ವಲ್ಪ ಸಮಯ ಕಾರನ್ನು ಬಂದ್ ಮಾಡುತ್ತೇವೆ ಅದೇ ರೀತಿ ಯೋಗಾಭ್ಯಾಸದಿಂದ ಬೆಚ್ಚಗಾದ ಶರೀರವನ್ನು ತಂಪಾಗಿರಿಸಲು ಯೋಗನಿದ್ರೆ ಅಗತ್ಯ. ಇದು ಯೋಗದಿಂದ ನಮಗೆ ಸಿಕ್ಕಿರುವ ಶಕ್ತಿ ಮತ್ತು ಉತ್ಸಾಹವನ್ನು ಬಲಗೊಳಿಸುತ್ತದೆ. ಯೋಗ ನಿದ್ರಾ ನಮ್ಮ ಶರೀರಕ್ಕೆ ಪೂರ್ತಿ ವಿಶ್ರಾಂತಿಯನ್ನು ನೀಡಿ ನಮ್ಮನ್ನು ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡಲು ಸಹಕರಿಸುತ್ತದೆ. ಆದುದರಿಂದ ಯೋಗಾಭ್ಯಾಸ ಮಾಡಿದ ಮೇಲೆ ಯೋಗನಿದ್ರೆಗೆ ಸ್ವಲ್ಪ ಸಮಯವನ್ನು ಕಾದಿರಸಲೇಬೇಕು..
ಯೋಗನಿದ್ರಾಕ್ಕೆ ತಯಾರಾಗೋಣ
ಯೋಗನಿದ್ರೆಯಲ್ಲಿ ನಾವು ಪ್ರಜ್ನಾಪೂರ್ವಕವಾಗಿ ನಮ್ಮ ಗಮನವನ್ನು ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತೇವೆ. ಇದರಿಂದ ಆ ಭಾಗದಲ್ಲಿನ ನರಗಳು ಸಕ್ರಿಯವಾಗಿ ಮಾಡಿದ ಆಸನ( ಯೋಗಭಂಗಿ) ಪರಿಣಾಮಕಾರಿಯಾಗಲು ಸಹಾಯ ಮಾಡುತ್ತದೆ.
ಯೋಗನಿದ್ರಾ ಮಾಡಲು ಹಂತ ಹಂತವಾಗಿ ಸೂಚನೆ ಕೆಳಗಿವೆ..
ಸಲಹೆ: ಶರೀರವನ್ನು ಬೆಚ್ಚಗಿಡಲು ಹೊದಿಕೆಯನ್ನು ಉಪಯೋಗಿಸುವುದು ಉತ್ತಮ. ಯೋಗಭಂಗಿಗಳಿಂದ ಬೆಚ್ಚಗಾದ ಶರೀರದಲ್ಲಿ ಕೂಡಲೆ ಉಷ್ಣ್ ತೆ ಇಳಿಯುವುದು ಸೂಕ್ತವಲ್ಲ.
ಯೋಗನಿದ್ರದಿಂದ ಆಗುವ ಲಾಭಗಳು
- ಯೋಗ ಭಂಗಿಗಳಿಂದ ಬೆಚ್ಚಗಾದ ಶರೀರವನ್ನು ತಂಪಾಗಿಸಿ ಶರೀರದ ಸಾಮಾನ್ಯ ಉಷ್ಣ್ ತೆಯನ್ನು ತಲುಪಲು ಸಹಕರಿಸುತ್ತದೆ.
- ಯೋಗದ ಪರಿಣಾಮವನ್ನು ಹೀರಿಕೊಂಡಿರುವ ನರಮಂಡಲಗಳನ್ನು ಸಕ್ರಿಯಗೊಳಿಸುತ್ತದೆ
- ದೇಹದಿಂದ ವಿಷಪೂರಿತ ಕಲ್ಮಶಗಳನ್ನು ಹೊರಹಾಕುತ್ತದೆ.
- ಬೆನ್ನಿನ ಮೇಲೆ ನೇರವಾಗಿ ಮಲಗಿ(ಶವಾಸನ) ಕಣ್ಣುಗಳನ್ನು ಮುಚ್ಚಿ ವಿಶ್ರಮಿಸಿ ಕೆಲವು ಆಳವಾದ ಉಸಿರನ್ನು ತೆಗೆದು ನಿಧಾನವಾಗಿ ಹೊರಹಾಕಿ. ಉಸಿರನ್ನು ಆರಾಮವಾಗಿ ನಿಧಾನವಾಗಿ ತೆಗೆಯಬೇಕೆಂಬುದು ನೆನಪಿರಲಿ.ಉಜ್ಜಯಿ ಉಸಿರಾಟ ಬೇಡ
ಸಲಹೆ: ನಿಮಗೆ ಏನಾದರೂ ಅಸ್ವಸ್ಥತೆ ಅಥವಾ ಬೆನ್ನಿನಲ್ಲಿ ನೋವು ಕಾಣಿಸಿಕೊಂಡರೆ ನಿಮ್ಮ ಭಂಗಿಯನ್ನು ಸರಿಪಡಿಸಿ. ಹೆಚ್ಚಿನ ಆರಾಮಕ್ಕಾಗಿ ದಿಂಬಿನ ಸಹಾಯದಿಂದ ನಿಮ್ಮ ಕಾಲನ್ನು ಸ್ವಲ್ಪ ಮೇಲಕ್ಕೆತ್ತಬಹುದು - ನಿಧಾನವಾಗಿ ನಿಮ್ಮ ಗಮನವನ್ನು ಬಲಪಾದದ ಕಡೆಗೆ ತೆಗೆದುಕೊಂಡು ಹೋಗಿ. ನಿಮ್ಮ ಕಾಲನ್ನು ವಿಶ್ರಮಿಸುತ್ತಾ ಕೆಲವು ಸೆಕೆಂಡುಗಳ ಕಾಲ ಗಮನವನ್ನು ಅಲ್ಲೇ ಇರಿಸಿ. ನಿಧಾನವಾಗಿ ನಿಮ್ಮ ಗಮನವನ್ನುಬಲ ಮೊಣಕಾಲು, ಬಲತೊಡೆ, ಬಲ ಪೃಷ್ಟ (ಸೊಂಟ) (ಕೆಲವಿ ಸೆಕೆಂಡುಗಳ ಕಾಲ) ಇಡೀ ಬಲಕಾಲಿನ ಮೇಲಿರಿಸಿ. ಎಡಕಾಲಿಗೆ ಕೂಡ ಈ ಪ್ರಕ್ರಿಯೆ ಪುನರಾವರ್ತಿಸಿ
- ಇದೇ ರೀತಿ ಶರೀರದ ಇತರ ಭಾಗಗಳ ಕಡೆಗೆ ಗಮನ ಹರಿಸಿ. ಜನನಾಂಗ ಪ್ರದೇಶ, ಹೊಟ್ಟೆ, ಹೊಕ್ಕಳ ಪ್ರದೇಶ, ಎದೆ, ಬಲಭುಜ, ಬಲಕೈ, ಎಡಭುಜ, ಎಡಕೈ, ಗಂಟಲು, ಮುಖ ಮತ್ತು ತಲೆಯ ಮೇಲಿನ ಭಾಗ.
- ಒಂದು ದೀರ್ಘವಾದ ಉಸಿರನ್ನು ತೆಗೆದುಕೊಂಡು ನಿಮ್ಮ ಶರೀರದಲ್ಲಾಗುವ ಸಂವೇದನಗಳನ್ನು ಗುರುತಿಸಿ. ಇದೇ ಭಂಗಿಯಲ್ಲಿ ಕೆಲವು ನಿಮಿಷಗಳ ಕಾಲ ವಿಶ್ರಮಿಸಿ.
- ಈಗ ನಿಧಾನವಾಗಿ ನಿಮ್ಮ ಶರೀರ ಮತ್ತು ಪರಿಸರವನ್ನು ಗಮನಿಸಿ. ನಿಮ್ಮ ಬಲಭಾಗಕ್ಕೆ ತಿರುಗಿ ಕೆಲವು ನಿಮಿಷಗಳಕಾಲ ಹಾಗೇ ಮಲಗಿರಿ.
- ನಿಮ್ಮದೇ ಸಮಯವನ್ನು ತೆಗೆದುಕೊಂಡು ನಿಧಾನವಾಗಿ ಎದ್ದು ಕುಳಿತುಕೊಳ್ಳಿ. ನಿಮಗೆ ಆರಮವೆನ್ನಿಸಿದಾಗ ನಿಧಾನವಾಗಿ ಕಣ್ಣುಗಳನ್ನು ತೆರೆಯಬಹುದು..
ಅತೀ ಬೇಗನೆ ವಿಶ್ರಾಂತಿ ಕೊಡುವ ಯೋಗಕ್ಕಾಗಿ ಸೂಕ್ಶ್ಮ ಯೋಗವನ್ನು ಕೂಡ ಅಭ್ಯಾಸ ಮಾಡಬಹುದು.
ಯೋಗನಿದ್ರೆಯು ಯೋಗಾಭ್ಯಾಸವನ್ನು ಆಹ್ಲಾದಕರವಾಗಿ ಯಾವುದೇ ಪರಿಶ್ರಮವಿಲ್ಲದೆ ಮುಕ್ತಾಯಗೊಳಿಸುತ್ತದೆ. ಎಲ್ಲವನ್ನು ಮರೆತು ವಿಶ್ರಮಿಸಿ. ನಿಮಗಾಗುವ ಅನುಭವವನ್ನು ಆನಂದಿಸಿ.
(ಜೀವನ ಕಲಾ ಯೋಗದ ಹಿರಿಯ ಶಿಕ್ಷಕರಾದ ಶ್ರೀಮತಿ ಚಂದ್ರಿಕಾ ರವರ ಮಾಹಿತಿಯ ಆಧಾರಿತ.)