ಈ ಯೋಗದ ಭಂಗಿಯ ಹೆಸರೇ ಹೇಳುವಂತೆ ಒಂದು ಉತ್ತಮ ಆಸನವಾಗಿದ್ದು, ಇದು ಹೊಟ್ಟೆಯ ಗಾಳಿಯನ್ನು ಹೊರತರುವಲ್ಲಿ ಒಳ್ಳೆಯ ಆಸನವಾಗಿದೆ
ಪವನ = ಗಾಳಿ, ಮುಕ್ತ = ಬಿಡಿರಿ , ಆಸನ = ವಿನ್ಯಾಸ ಅಥವಾ ಭಂಗಿ
ಪವನಮುಕ್ತಾಸನವನ್ನು ಹೇಗೆ ಮಾಡುವುದು ?
- ನಿಮ್ಮ ಕಾಲುಗಳನ್ನು ಒಟ್ಟಾಗಿಸಿ ನಿಮ್ಮ ಬೆನ್ನಿನ ಮೇಲೆ ಮಲಗಿ ಹಾಗೂ ತೋಳುಗಳನ್ನು ನಿಮ್ಮ ಶರೀರದ ಪಕ್ಕದಲ್ಲಿರಿಸಿ.
- ಉಸಿರನ್ನು ಒಳಗೆ ತೆಗೆದುಕೊಳ್ಳಿ ಮತ್ತು ಉಸಿರನ್ನು ಬಿಡುತ್ತಾ, ನಿಮ್ಮ ಬಲಮಂಡಿಯನ್ನು ನಿಮ್ಮ ಎದೆಯ ಕಡೆಗೆ ತನ್ನಿರಿ ಮತ್ತು ತೊಡೆಯನ್ನು ನಿಮ್ಮ ಹೊಟ್ಟೆಯ ಕಡೆಗೆ ತಂದು ಕೈಗಳಿಂದ ಒತ್ತಿ ಹಿಡಿಯಿರಿ.
- ಪುನ: ಉಸಿರನ್ನು ತೆಗೆದುಕೊಂಡು ಹಾಗೂ ನೀವು ಉಸಿರನ್ನು ಬಿಡುವಾಗ, ನಿಮ್ಮ ತಲೆಯನ್ನು ಎತ್ತಿರಿ ಮತ್ತು ಎದೆಯನ್ನು ನೆಲದ ಮೇಲಿನಿಂದ ಎತ್ತಿ ಮತ್ತು ನಿಮ್ಮ ಗಲ್ಲವನ್ನು ನಿಮ್ಮ ಬಲಮಂಡಿಗೆ ತಾಗಿಸಿ.
- ಇದೇ ಸ್ಥಿತಿಯಲ್ಲಿ ಇದ್ದು ದೀರ್ಘವಾದ ಉಸಿರನ್ನು ಒಳಗೆ ,ಹೊರಗೆ ತೆಗೆದುಕೊಳ್ಳುತ್ತಿರಿ..
- ಗಮನಿಸುವ ಅಂಶ: ಉಸಿರನ್ನು ಬಿಡುವಾಗ ನಿಮ್ಮ ಕೈಗಳಿಂದ ಮಂಡಿಯ ಹಿಡಿತವನ್ನು ಹೆಚ್ಚುಗೊಳಿಸಿ ಮತ್ತು ಎದೆಯ ಮೇಲಿನ ಒತ್ತಡವನ್ನು ಹೆಚ್ಚಿಸಿ. ನೀವು ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಹಿಡಿತವನ್ನು ಕಡಿಮೆಗೊಳಿಸಿ.
- ಉಸಿರನ್ನು ನೀವು ಬಿಡುವಾಗ, ನೆಲದ ಮೇಲೆ ಹಿಂದೆ ಬಂದು ವಿಶ್ರಮಿಸಿ
- ಇದನ್ನೇ ಎಡಕಾಲಿನಲ್ಲೂ ಪನರಾವರ್ತಿಸಿ ಹಾಗೂ ಎರಡೂ ಕಾಲು ಒಟ್ಟಿಗೆ ತಂದು ಇದೇ ರೀತಿ ಮಾಡಿರಿ.
- ನೀವು ಮೇಲೆ ಮತ್ತು ಕೆಳಗೆ ಅಥವಾ ಎಡದಿಂದ ಬಲಕ್ಕೆ ,ಬಲದಿಂದ ಎಡಕ್ಕೆ ಮೂರರಿಂದ ಐದರವರೆವಿಗೂ ನಿಮ್ಮ ಶರೀರವನ್ನು ತೂಗಬಹುದು.
ಪವನಮುಕ್ತಾಸನವು ಪದ್ಮಸಾಧನದ ಒಂದು ಭಾಗವಾಗಿದೆ. ಈ ವಿಶೇಷವಾದ ಯೋಗದ ಭಂಗಿಯನ್ನು ಜೀವನ ಕಲೆಯ ಮೌನದ ಶಿಬಿರದಲ್ಲಿ ಹಾಗೂ ಡಿ ಎಸ್ ಎನ್ ಶಿಬಿರದಲ್ಲಿ ಕಲಿಸಲಾಗುವುದು
ಪವನಮುಕ್ತಾಸನದಿಂದಾಗುವ ಉಪಯೋಗಗಳು
- ಬೆನ್ನು ಮತ್ತು ಹೊಟ್ಟೆಯ ಮಾಂಸಖಂಡಗಳನ್ನು ಗಟ್ಟಿಯಾಗಿಸುತ್ತದೆ
- ಕಾಲು ಮತ್ತು ತೋಳಿನ ಮಾಂಸಖಂಡಗಳನ್ನು ಒಂದು ಮಟ್ಟದಲ್ಲಿರಿಸುತ್ತದೆ
- ಕರುಳು ಮತ್ತು ಇತರ ಹೊಟ್ಟೆಯ ಭಾಗಗಳನ್ನು ಮಾಲೀಸು ಮಾಡುತ್ತದೆ.
- ಜೀರ್ಣ ಹಾಗೂ ಗಾಳಿಯನ್ನು ಬಿಡುಗಡೆ ಮಾಡಲು ಸಹಾಯವಾಗುತ್ತದೆ
ಪವನಮುಕ್ತಾಸನದಿಂದಾಗುವ ವಿರೋಧತೆಗಳು
- ಈ ಕೆಳಕಂಡ ತೊಂದರೆಗಳಿಂದ ಬಳಲುತ್ತಿದ್ದರೆ ಈ ಪವನಮುಕ್ತಾಸನವನ್ನು ಮಾಡುವುದನ್ನು ನಿರಾಕರಿಸಬೇಕು.
- ಹೆಚ್ಚಿನ ರಕ್ತದೊತ್ತಡ, ಹೃದಯದ ತೊಂದರೆ, ಹೆಚ್ಚಿನ ವಾಯು, ಹರ್ನಿಯಾ, ಬೆನ್ನುಮೂಳೆಯ ಸರಿತ, ವೃಷಣದ ಅಸ್ತವ್ಯಸ್ತತೆ ( ಪುರುಷ ವೀರ್ಯ ಕೋಶ) ಮಾಸಿಕ ರಜಸ್ವಲನ, ಕುತ್ತಿಗೆ ಮತ್ತು ಬೆನ್ನು ನೋವು ಹಾಗೂ ಎರಡು ತಿಂಗಳ ನಂತರದ ಬಸುರಿಯರು.
ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.in ನಲ್ಲಿ ಸಂಪರ್ಕಿಸಿ.