ನಿಮ್ಮ ಮೊಬೈಲ್ ಪೋನಿನಿಂದದಾಗಿ ನಿಮ್ಮ ಕತ್ತಿನಲ್ಲಿ, ತಲೆಯಲ್ಲಿ ಅಥವಾ ಭುಜಗಳಲ್ಲಿ ನೋವಿದೆಯೆ?
ಮುಂದುವರಿದ ತಂತ್ರಜ್ಞಾನದ ಶಕೆಯಲ್ಲಿ ನಾವಿದ್ದೇವೆ ಮತ್ತು ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಯಂತ್ರವೆಂದರೆ ಮೊಬೈಲ್ ಪೋನುಗಳು. ಶಿಕ್ಷಣದಿಂದ ಆರೋಗ್ಯದವರೆಗೆ, ವೈಯಕ್ತಿಕ ಸಂಬಂಧಗಳಿಂದ ವ್ಯಾಪಾರದವರೆಗೆ, ಮೊಬೈಲ್ ಪೋನುಗಳು ನಮ್ಮ ಜಗತ್ತಿನಲ್ಲಿ ಮೂಲಭೂತವಾದ ಪರಿವರ್ತನೆಯನ್ನು ತಂದಿವೆ.
ಆದರೆ ಇವುಗಳ ವ್ಯಾಪಕವಾದ ಬಳಕೆಯಿಂದಾಗಿ ಅಥವಾ ದುರ್ಬಳಕೆಯಿಂದಾಗಿ ನಮ್ಮ ಜೀವನಶೈಲಿಯಲ್ಲಿ ಕೆಲವು ಸಮಸ್ಯೆಗಳನ್ನೂ ತಂದಿವೆ. ಉದಾಹರಣೆಗೆ, ನೀವು ಈ ಲೇಖನವನ್ನು ನಿಮ್ಮ ಮೊಬೈಲ್ನಿಂದ ಓದುತ್ತಿದ್ದರೆ ನಿಮ್ಮ ತೋಳುಗಳು ನಿಮ್ಮ ಬದಿಯಲ್ಲಿರುತ್ತದೆ, ನಿಮ್ಮ ಬೆನ್ನು ಬಗ್ಗಿರುತ್ತದೆ, ಕತ್ತು ಮುಂದಕ್ಕೆ ಬಗ್ಗಿರುತ್ತದೆ. ಅಲ್ಲವೆ? ಈ ಭಂಗಿಯಿಂದ ನಿಮಗೆ ನೋವಾಗುತ್ತಿರಬಹುದು ಮತ್ತು ಇದರ ಬಗ್ಗೆ ನಿಮಗೆ ಅರಿವಿರಬಹುದು ಅಥವಾ ಅರಿವಿಲ್ಲದೆಯೂ ಇರಬಹುದು. ಚಿಕಿತ್ಸಕರು “ಟೆಕ್ಸ್ಟ್ ನೆಕ್” ಎಂದು ಈ ಸ್ಥಿತಿಯನ್ನು ಕರೆಯುತ್ತಾರೆ ಮತ್ತು ನಿಮ್ಮಲ್ಲಿ ಈ ಸ್ಥಿತಿಯು ಆರಂಭವಾಗುತ್ತಿರಬಹುದು.
ಮಧ್ಯ ಸ್ಥಿತಿಯಲ್ಲಿದ್ದಾಗ, ಕಿವಿಗಳು ಭುಜಗಳ ಮೇಲಿದ್ದಾಗ ಸಾಮಾನ್ಯವಾಗಿ ಮಾನವರ ತಲೆಯು 4.5 ಕೆಜಿಗಳಷ್ಟು ತೂಕವನ್ನು ಹೊಂದಿರುತ್ತದೆ. ನಿಮ್ಮ ತಲೆಯನ್ನು ನೀವು ಒಂದು ಇಂಚಿನಷ್ಟು ಮುಂದೆ ಬಗ್ಗಿಸಿದರೂ ನಿಮ್ಮ ಬೆನ್ನುಮೂಳೆಯ ಮೇಲಿನ ಒತ್ತಡ ದ್ವಿಗುಣವಾಗುತ್ತದೆ. ಆದ್ದರಿಂದ, ನಿಮ್ಮ ತೊಡೆಯ ಮೇಲಿಟ್ಟುಕೊಂಡು ನಿಮ್ಮ ಸ್ಮಾರ್ಟ್ಫೆÇೀನನ್ನು ನೋಡುತ್ತಿದ್ದರೆ, ನಿಮ್ಮ ಕತ್ತು ಹತ್ತು ಅಥವಾ 14 ಕೆಜಿ ತೂಕವನ್ನು ಎತ್ತಿಕೊಂಡಿರುವುದಕ್ಕೆ ಸರಿಸಮಾನವಾಗುತ್ತದೆ. ಈ ಎಲ್ಲಾ ಹೆಚ್ಚಿನ ಒತ್ತಡದಿಂದ ನಿಮ್ಮ ಬೆನ್ನುಮೂಳೆಯ ಮೇಲೆ ಒತ್ತಡವು ಹೆಚ್ಚಿ, ಕ್ರಮವಾದ ಜೋಡಣೆಯಿಂದ ಹೊರಬಂದಂತಾಗುತ್ತದೆ.
ಸ್ವಲ್ಪ ತಾಳಿ! ಈ ಯಾವ ಸಾಧನಗಳನ್ನೂ ಬಳಸಬಾರದೆಂದು ನಾವು ಈ ಲೇಖನದಲ್ಲಿ ಪ್ರತಿಪಾದಿಸುತ್ತಿಲ್ಲ. ಈ ಸಣ್ಣ ಸಾಧನಗಳಿಂದಾಗಿ ಎಲ್ಲರ ಜೀವನವೂ ಸುಗಮವಾಗಿದೆ. ಆದ್ದರಿಂದ, ಕೆಲವು ಸೂಚಿಗಳನ್ನು ಪಾಲಿಸಿ, ಅವುಗಳ ಅಡ್ಡಪರಿಣಾಮದಿಂದ ದೂರ ಉಳಿಯುವುದೇ ಲೇಸು.
ಕೆಲವು ಪರಿಣಾಮಕಾರಕವಾದ ಯೋಗದ ಸೂಚಿಗಳು
ಬಲವಾದ, ನಮ್ಯವಾದ ಕತ್ತು ಮತ್ತು ಬೆನ್ನನ್ನು ಹೊಂದುವುದರಿಂದ ಅಸಹಜವಾದ ಒತ್ತಡಗಳನ್ನು ತಡೆದುಕೊಳ್ಳಬಹುದು. ಮೊಬೈಲ್ ಪೋನುಗಳ ಬಳಕೆಯಿಂದ ಉಂಟಾಗುವ ಮೂಳೆಗಳ - ಸ್ನಾಯುಗಳ ಸಮಸ್ಯೆಗಳನ್ನು ಇದರಿಂದ ತಡೆಗಟ್ಟಬಹುದು. ಕೆಲವು ವ್ಯಾಯಾಮಗಳನ್ನು ಮಾಡಿದರೆ ಒತ್ತಡದಲ್ಲಿರುವ ಬೆನ್ನು ಮತ್ತು ಕತ್ತಿನ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ನಿಮ್ಮ ಪ್ರೀತಿಪಾತ್ರರೊಡನೆ ಚಾಟಿಂಗ್ ಮಾಡುವ ಸಲುವಾಗಿ ಟೆಕ್ಟ್ಸ್ಗಳನ್ನು ಕಳುಹಿಸುತ್ತಿರುವಾಗ ನಿಮಗುಂಟಾಗುವ ಕಿವುಚುವಿಕೆ ಮತ್ತು ನೋವನ್ನು ಇವುಗಳಿಂದ ತಡೆಯಿರಿ
- ಕಿವಿಗಳಿಗೆ ವ್ಯಾಯಾಮ: ನಿಮ್ಮ ಕಿವಿಗಳನ್ನು ಮೇಲಿನಿಂದ ಕೆಳಗಿನವರೆಗೂ ಒತ್ತಿ. ಒಂದೆರಡು ಸಲ ಕಿವಿಗಳನ್ನು ಎಳೆದು, ಗಡಿಯಾರದ ದಿಕ್ಕಿನಲ್ಲಿ ಮತ್ತು ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ. ಇದರಿಂದ ಕಿವಿಗಳ ಸುತ್ತಲೂ ಇರುವ ಒತ್ತಡವು ಬಿಡುಗಡೆಯಾಗುತ್ತದೆ.
- ತೋಳುಗಳ ಹಿಗ್ಗುವಿಕೆ: ನಿಮ್ಮ ತೋಳುಗಳನ್ನು ನಿಮ್ಮ ತಲೆಯ ಮೇಲೆಕ್ಕೆತ್ತಿ ಮತ್ತು ಹಸ್ತಗಳು ಆಕಾಶದತ್ತ ನೋಡುತ್ತಿರಲಿ. ಹಸ್ತಗಳನ್ನು ಆಕಾಶದ ಕಡೆಗೆ ಒತ್ತಿ. ನಂತರ ನಿಮ್ಮ ತೋಳುಗಳನ್ನು ನಿಮ್ಮ ಇಬ್ಬದಿಯಲ್ಲಿ ಚಾಚಿ ಬೆರಳುಗಳನ್ನು ಹಿಂದಕ್ಕೆ ತನ್ನಿ. ವಿದಾಯ ಹೇಳುವ ರೀತಿಯಲ್ಲಿ ಎರಡು ಸಲ ನಿಮ್ಮ ಹಸ್ತಗಳನ್ನು ಮೇಲುಕೆಳಗೆ ತಿರುಗಿಸಿ, ಭುಜಗಳಲ್ಲಿ ಬಾಹುಗಳಲ್ಲಿ ಇರುವ ಒತ್ತಡಕ್ಕೆ ವಿದಾಯ ಹೇಳಿ ಬಿಡಿ.
- ಭುಜಗಳ ವ್ಯಾಯಾಮ: ನಿಮ್ಮ ತೋಳುಗಳನ್ನು ಎರಡು ಕಡೆಗಳಿಗೂ ಚಾಚಿ. ಕಿರುಬೆರಳು ಹೆಬ್ಬೆಟ್ಟಿನ ಕೆಳಭಾಗವನ್ನು ಒತ್ತಲಿ. ತೋಳುಗಳನ್ನು, ಹಸ್ತವನ್ನು ಸ್ತಬ್ಧವಾಗಿಟ್ಟುಕೊಂಡು ಭುಜಗಳನ್ನು ಗಡಿಯಾರದ ದಿಕ್ಕಿನೆಡೆಗೆ ಮತ್ತು ಗಡಿಯಾರದ ದಿಕ್ಕಿನ ವಿರುದ್ಧದ ಕಡೆಗೆ 5 ಸಲ ತಿರುಗಿಸಿ.
- ಹಸ್ತಗಳನ್ನು ಒತ್ತಿ: ನಿಮ್ಮ ಹಸ್ತಗಳ ಕೆಳಭಾಗವನ್ನು ನಿಮ್ಮಎದೆಯ ಮುಂದಕ್ಕೆ ತನ್ನಿ. ಅವುಗಳನ್ನು ಬಲವಾಗಿ ಒತ್ತಿ, ಭುಜಗಳನ್ನು ಸ್ತಬ್ಧವಾಗಿಡಿ. ಎರಡು ಸಲ ಬಲವಾಗಿ ಒತ್ತಿ ಸಡಿಲಗೊಳಿಸಿ ಹಸ್ತಗಳನ್ನು ಹಿಂದಕ್ಕೆ ತಿರುಗಿಸಿ ಮತ್ತೆ ಬಲವಾಗಿ ಒತ್ತಿ ಸಡಿಲಗೊಳಿಸಿ. ಎರಡು ಸಲ ಮಾಡಿ.
- ಮೊಣಕೈಗಳಿಗೆ ವ್ಯಾಯಾಮ: ನಿಮ್ಮ ಕೈಗಳನ್ನು ಎದೆಯ ಮುಂದೆ ತಂದು ನಿಮ್ಮ ಬೆರಳುಗಳನ್ನು ಒಂದರೊಳಗೊಂದು ಜೋಡಿಸಿ. ನಿಮ್ಮ ಹಸ್ತಗಳನ್ನು ನಿಮ್ಮ ಎದೆಯ ಮುಂದಿಟ್ಟು ನಿಮ್ಮ ಮೊಣಕೈ ಮತ್ತು ಭುಜದಿಂದ ಮಲಗಿರುವ ಎಂಟು ಸಂಖ್ಯೆಯನ್ನು ಗಾಳಿಯಲ್ಲಿ ಬರೆಯಿರಿ.
- ಭುಜಗಳ ಹಿಗ್ಗುವಿಕೆ: ನಿಮ್ಮ ಬಲಗೈಯನ್ನು ತಲೆಯ ಮೇಲಿರಿಸಿ. ಎಡಗೈಯಿಂದ ಬಲವಾಗಿ ಬಲಮಂಡಿಯನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಎಡಗೈಯನ್ನು ಅಲುಗಾಡಿಸದೆ ಬಲಗೈಯನ್ನು ತಲೆಯಿಂದ ಸೊಂಟದವರೆಗೆ ಮತ್ತು ಸೊಂಟದಿಂದ ತಲೆಯವರೆಗೆ ಕೆಲವು ಸಲ ತನ್ನಿ. ಈಗ ಎಡಗೈಯಿಂದ ಇದನ್ನು ಪುನರಾವರ್ತಿಸಿ.
- ಹೆಬ್ಬೆಟ್ಟುಗಳನ್ನು ಒತ್ತುವುದು: ನಿಮ್ಮ ಹೆಬ್ಬೆಟ್ಟುಗಳನ್ನು ನಿಮ್ಮ ಎದೆಯ ಮುಂದೆ ತಂದು, ಎರಡು ದಿಕ್ಕುಗಳಲ್ಲಿ ಕೆಲವು ಸಲ ತಿರುಗಿಸಿ. ನಿಮ್ಮ ಎಲ್ಲಾ ಬೆರಳುಗಳನ್ನು ಒಂದಾಗಿ ತಂದು, ಎರಡು ಸಲ ಒತ್ತಿ, ಬಿಡಿ.
ಈ ಯೋಗದ ವ್ಯಾಯಾಮದಿಂದ ನಿಮ್ಮ ನೋವು ಹೊರಟು ಹೋಗುತ್ತದೆಯಾದರೂ ಇವುಗಳನ್ನು ಮರೆಯಬಿಡಿ
- ನಿಮ್ಮ ಸಾಧನವನ್ನು ಸರಿಯಾದ ಭಂಗಿಯಲ್ಲಿ ಇಟ್ಟುಕೊಳ್ಳಿ:ನಿಮ್ಮ ತೊಡೆಯ ಮೇಲಿಟ್ಟು ನಿಮ್ಮ ಕತ್ತನ್ನು ಬಗ್ಗಿಸುವ ಬದಲಿಗೆ, ನಿಮ್ಮ ಕಣ್ಣಿನ ಸಮಾನದ ಹಂತಕ್ಕೆ ನಿಮ್ಮ ಸಾಧನವನ್ನು ಇಟ್ಟುಕೊಳ್ಳುವ ರೀತಿಯನ್ನು ಕಂಡುಕೊಳ್ಳಿ.
- ಆಗಾಗ ವಿರಾಮವನ್ನು ತೆಗೆದುಕೊಳ್ಳಿ: ಇಡೀ ದಿನ ಈ ಸಾಧನಗಳನ್ನು ಬಳಸುತ್ತಲೇ ಇರುತ್ತೀರಿ ಎಂದು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಬಲವಂತವಾಗಿ ಆದರೂ ಸರಿ, ಆಗಾಗ ವಿರಾಮವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಭಂಗಿಯನ್ನು ಬದಲಿಸುತ್ತಿರಿ.
ಈ ಸರಳವಾದ ಯೋಗದ ವ್ಯಾಯಾಮಗಳನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಮತ್ತು ಓರ್ವ ಸ್ಮಾರ್ಟ್ ಫೋನಿನ ಯೋಗಿಯಾಗಿ!
ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು iಟಿಜಿo@sಡಿisಡಿiಥಿogಚಿ.iಟಿ ನಲ್ಲಿ ಸಂಪರ್ಕಿಸಿ.