ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡಿ, ’ಟ್ರೆಡ್ ಮಿಲ್’ ನಲ್ಲಿ ನಡೆದಾಡಿ,ಭಾರ ಎತ್ತುವುದು ಬಹಳ ಜನರ ಬೆಳಗಿನ ದಿನಚರಿ, ಅದರಿಂದ ಜನರಿಗೆ ಸಂತೋಷ ಸಿಗುತ್ತದೆ. ಅದೇ ರೀತಿ ಇಡೀ ದಿನ ಸಂತೋಷವಾಗಿರಲು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಧ್ಯಾನ ಮಾಡಿದರೆ ಸಾಧ್ಯ ಎಂದರೆ ನಂಬುತೀರಾ?"ಧ್ಯಾನ" ಎಂದರೆ ತನ್ನೊಳಗೆ ಆಳವಾಗಿ ಸಂಚರಿಸುವುದು."ಧ್ಯಾನ" ಸದಾಕಾಲ ನಮ್ಮನ್ನು ಸಂತೋಷವಾಗಿರಿಸುವ ಸಾಧನ.ಆದುದರಿಂದ ನಮ್ಮ ಬೆಳಗಿನ ದಿನಚರಿಗೆ ಧ್ಯಾನವನ್ನು ಸೇರಿಸುವುದರಿಂದ, ನಮ್ಮ ಸಂತೋಷವು ವರ್ಧಿಸಿ, ಇಡೀ ದಿನ ನಗುತ್ತಿರುವಂತೆ ಆಗುತ್ತದೆ ನಮ್ಮ ಜೀವನ ಶೈಲಿ.
ಇಡೀ ದಿನ ಬಹಳಷ್ಟು ಕೆಲಸಗಳು, ವಿಚಾರಗಳು ಇರುವುದರಿಂದ ಬೆಳಿಗ್ಗೆ ಎದ್ದು ಧ್ಯಾನ ಮಾಡುವುದು ಬಹಳ ಉಪಯೋಗಕಾರಿ. ಕೋಮಲ್ ಎಂಬ ಮಹಿಳಾ ಉದ್ಯಮಿ ಹೀಗೆ ಹೇಳುತ್ತಾರೆ. ನಾನು ಬೆಳಿಗ್ಗೆ "ಧ್ಯಾನ" ಮಾಡಿದ ದಿನಗಳಲ್ಲಿ,ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಆಗಿರುತ್ತದೆ,ಇಷ್ಟು ಅಲ್ಲದೆ ಮನಸ್ಸು ಶಾಂತ ರೀತಿಯಲ್ಲಿದ್ದು ಹೆಚ್ಚಿನ ವಿಶ್ರಾಂತಿ ಸಿಗುತ್ತದೆ.ಮನಸ್ಸಿನ ಸ್ಪಷ್ಟತೆ ಇದ್ದು ಇಡೀ ದಿನ ಒಳಮನಸ್ಸು ಸಹ ಶಾಂತ ರೀತಿಯಲ್ಲಿ ಕೆಲಸ ಮಾಡುತ್ತದೆ ಹಾಗು ಧ್ಯಾನ ಎಂಬುವುದು ಇಡೀ ದಿನ ಮನುಷ್ಯನನ್ನು ಸಂತೋಷವಾಗಿರಿಸುವ ಕೀಲಿ ಕೈ ಆಗಿದೆ.
ಬೆಳಿಗ್ಗೆ ಎದ್ದು ಧ್ಯಾನ ಮಾಡಲು ಸಹಾಯಕವಾಗಿರುವ ಸಲಹೆಗಳು
1. ಧ್ಯಾನ ಮಾಡುವ ಸಲುವಾಗಿ ಒಂದು ಪ್ರತ್ಯೇಕ ಜಾಗವನ್ನು ಮಾಡಿಕೊಳ್ಳಿ
ಧ್ಯಾನ ಮಾಡುವ ಸ್ಥಳವನ್ನು ನಿರ್ಧರಿಸಿ ಅಲ್ಲಿ ಒಳ್ಳೆಯ ಅಲಂಕಾರಿಕ ವಸ್ತುಗಳನ್ನು ನೇತುಹಾಕಿ. ನಿಮಗೆ ಇಷ್ಟವಿರುವ ಹೂವು ಮತ್ತು ಸುಗಂಧವಿರುವ ಸಸಿಗಳನ್ನು ಹತ್ತಿರದ ಮೇಜಿನ ಮೇಲೆ ತಂದಿರಿಸಿ. ಆ ಕೋಣೆಯನ್ನು ಶಾಂತ ಬಣ್ಣಗಳಾದ, ತಿಳಿಹಳದಿ, ತಿಳಿನೀಲಿ ಅಥವಾ ಹಸಿರು ಬಣ್ಣದಿಂದ ಅಲಂಕರಿಸಿ. ಸೋಫ ಅಥವಾ ಕುರ್ಚಿಯನ್ನು, ದಿಂಬು ಅಥವಾ ತೆಳು ಹೊದಿಕೆಯಿಂದ ಅಲಂಕರಿಸಿ.
2. ಬೆಳಿಗ್ಗೆ ತಿಂಡಿಯನ್ನು ಧ್ಯಾನದ ನಂತರ ತೆಗೆದುಕೊಳ್ಳಿ
ಖಾಲಿ ಹೊಟ್ಟೆಯಲ್ಲಿ ಧ್ಯಾನ ಮಾಡುವುದು ಉತ್ತಮ ಅದನ್ನು ರೂಢಿಸಿಕೊಳ್ಳಿ.
3. ಬೆಳಗ್ಗಿನ ದಿನಚರಿಯನ್ನು ನಡೆದಾಡುವ ಅಭ್ಯಾಸದಿಂದ ಆರಂಭಿಸಿ.
ಪ್ರಕೃತಿಯ ಜೊತೆ ಇರುವುದರಿಂದ ಅದು ನಮ್ಮನ್ನು ಜೀವನದ ಮೂಲ ಸ್ಥಿತಿಗೆ ಜೋಡಿಸುತ್ತದೆ.ಬೆಳಿಗ್ಗೆ ಎದ್ದು ಧ್ಯಾನಕ್ಕೂ ಮೊದಲು ನಡೆದಾಡುವುದರಿಂದ ತಾಜಾ ಹವಾ ನಮಗೆ ಉಸಿರಾಡಲು ಸಿಗುತ್ತದೆ ಹಾಗು ಗಿಡಗಳ ಮೇಲಿನ ತುಂತುರು ಹನಿಗಳನ್ನು ಅನುಭವಿಸುತ್ತಾ ಶಾಂತ ಮನಸ್ಥಿತಿಗೆ ಹೋಗುತ್ತೇವೆ.
4. ಧ್ಯಾನಕ್ಕೂ ಮೊದಲು ದೇಹದ ವ್ಯಾಯಾಮ ಮಾಡಿ
ನಿಮಗೆ ಬೆಳಗ್ಗೆ ಎದ್ದು "ಜಾಗಿಂಗ್" ಮಾಡುವುದು ಅಥವಾ ವ್ಯಾಯಾಮ ಮಾಡುವುದು ಉತ್ಸಾಹ ತರುತ್ತಿದ್ದರೆ,ಅದನ್ನು ಮಾಡಿ ನಂತರ ಧ್ಯಾನಕ್ಕೆ ಕುಳಿತುಕೊಳ್ಳಿ. ಧ್ಯಾನವು ನಿಮ್ಮ ದೇಹವನ್ನು ತಂಪು ಮಾಡಿ, ವಿಶ್ರಾಂತಿ ಕೊಡುತ್ತದೆ ಹಾಗು ಅದರ ಜೊತೆಗೆ ಮನಸ್ಸನ್ನು ಉಲ್ಲಾಸದಾಯಕವಾಗಿ ಇರಿಸುತ್ತದೆ.
5. ಧ್ಯಾನಕ್ಕೆ ಮೊದಲು ಯೋಗದ ಭಂಗಿಗಳನ್ನು ಮಾಡಿ ವಿಶ್ರಾಂತಿ ಪಡೆದುಕೊಳ್ಳಿ.
ಬೆಳಗ್ಗಿನ ನಡೆದಾಡುವಿಕೆ, ವ್ಯಾಯಾಮ, ಯೋಗ, ಇವುಗಳು ನಮ್ಮ ಸ್ನಾಯುಗಳನ್ನು ಸಡಿಲಿಸುತ್ತದೆ.
ಇಲ್ಲಿ ಕೆಲವು ವಿಶ್ರಾಂತಿದಾಯಕ ಯೋಗದ ಭಂಗಿಗಳ ಬಗ್ಗೆ ತಿಳಿಸಲಾಗಿದೆ, ನೀವೂ ಪ್ರಯತ್ನಿಸಬಹುದು.
ಸೂರ್ಯ ನಮಸ್ಕಾರದ ಸರಣಿ
ಸೂರ್ಯ ನಮಸ್ಕಾರದ ಸರಣಿಯು, ಸೂರ್ಯದೇವನಿಗೆ ಕ್ರತಜ್ಞತೆ ಸಲ್ಲಿಸುವ ಕ್ರಮವಾದ ಯೋಗದ ಭಂಗಿಗಳು. ಇದು ಈ ಗ್ರಹದಲ್ಲಿ ಜೀವನವನ್ನು ಎತ್ತಿಹಿಡಿದಿದೆ, ಎಂದರೆ ಜೀವಶಕ್ತಿಯನ್ನು ತುಂಬಿ, ಮನಸನ್ನು ಶಾಂತಗೊಳಿಸುವ ಈ ಸರಣಿಗಿಂತ ನಮಗಿನ್ನೇನು ಬೇಕು. ಬೆಳಗ್ಗೆಯ ಯೋಗದ ನಿತ್ಯಕ್ರಮವನ್ನು ತೆರೆದಿಡುವ ಸರಣಿಯಾಗಿದೆ ಈ ಸೂರ್ಯನಮಸ್ಕಾರ.
"ಹಾ" ಪ್ರಕ್ರಿಯೆ
ನಿಮ್ಮ ಪಾದಗಳನ್ನು, ಭುಜದ ಅಳತೆಗೆ ಅಗಲಿಸಿ. ಎರಡು ತೋಳುಗಳು ದೇಹದ ಎರಡು ಬದಿಯಲ್ಲಿ ನೇತಾಡಲಿ, ನೀಳವಾದ ಉಸಿರು ತೆಗೆದುಕೊಳ್ಳುತ್ತಾ ನಿಮ್ಮ ತೋಳುಗಳನ್ನು ಎಡಕ್ಕೆ ತಿರುಗಿಸಿ, ಉಸಿರು ಬಿಡುತ್ತಾ ಜೋರಾಗಿ "ಹಾ" ಎಂಬ ಶಬ್ದ ಮಾಡಿ. ಇದೇ ರೀತಿ ಮತ್ತೆ ಬಲಕ್ಕೆ ತೋಳುಗಳನ್ನು ತಿರುಗಿಸಿ "ಹಾ"ಶಬ್ದ ಮಾಡಿ.
ಆಲಂಗನ
ನಿಮ್ಮ ಪಾದಗಳನ್ನು, ಭುಜದ ಅಳತೆಗೆ ಅಗಲಿಸಿ, ಉಸಿರು ತೆಗೆದುಕೊಳ್ಳುತ್ತಾ ನಿಮ್ಮ ಎರಡು ತೋಳುಗಳನ್ನು ಮೇಲೆತ್ತಿ ಅಂಗೈ ಮೇಲ್ಮುಖ ಮಾಡಿಕೊಳ್ಳಿ, ನಂತರ ನಿಧಾನವಾಗಿ ಉಸಿರು ಬಿಡಿ. ನಂತರ ತಲೆಯನ್ನು ವಾಲಿಸಿ ತೋಳುಗಳನ್ನು ಹಿಂದೆ ಹಾಕಿ, ತಲೆ ಎತ್ತಿ ಮೇಲೆ ನೋಡುತ್ತಾ ಉಸಿರನ್ನು ತೆಗೆದುಕೊಳ್ಳಿ. ಉಸಿರು ಬಿಡುವಾಗ ತಲೆಯನ್ನು ಬಗ್ಗಿಸಿ(ಎದೆಯವರೆಗು) ತೋಳುಗಳನ್ನು ಮೇಲೆ ಮಾಡಿ ನಿಮ್ಮನ್ನೇ ತಬ್ಬಿ ಕೊಳ್ಳಿ, ಮತ್ತೆ ಉಸಿರು ತೆಗೆದುಕೊಳ್ಳಿ, ಇದೇ ರೀತಿ 2-3 ಬಾರಿ ಮಾಡಿ.
ವೀರಭದ್ರಾಸನ
ಯೋಗದ ಈ ಭಂಗಿ, ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳುವುದಲ್ಲದೆ, ದೇಹದ ತ್ರಾಣವನ್ನು ಹೆಚ್ಚಿಸುತ್ತದೆ. ಇದು ಮಂಗಳದಾಯಕವಾದ ಮನಸ್ಥಿತಿ, ಧೈರ್ಯ, ಆಕರ್ಷಣೆ, ಶಾಂತಿ ಇವೆಲ್ಲವನ್ನೂ ಹೆಚ್ಚಿಸುವಂತ ಆಸನ.
ತ್ರಿಕೋಣಾಸನ
ಈ ಆಸನ ಮಾನಸಿಕ ಮತ್ತು ದೈಹಿಕ ಸಮತೊಲನವನ್ನು ಹೆಚ್ಚಿಸುತ್ತದೆ. ಅಲ್ಲದೆ ಜೀರ್ಣಶಕ್ತಿಯನ್ನು ಹೆಚ್ಚಿಸಿ ಆತಂಕವನ್ನು ಕಡಿಮೆ ಮಾಡುತ್ತದೆ..
ಹಸ್ತಪಾದಾಸನ
ಈ ಆಸನದಿಂದ ಬೆನ್ನಿನ ಎಲ್ಲಾ ಸ್ನಾಯುಗಳು ಬಾಚಿ, ನರಮಂಡಲಕ್ಕೆ ಚೈತನ್ಯ ಕೊಡುತ್ತದೆ ಹಾಗು ರಕ್ತದ ಸರಬರಾಜು ನರಮಂಡಲಕ್ಕೆ ಚೆನ್ನಾಗಿ ಆಗುತ್ತದೆ.
ಪಶ್ಚಿಮೋತ್ತನಾಸನ
ಈ ಆಸನ ಬೆನ್ನಿನ ಕೆಳಭಾಗ, ಸೊಂಟ ಮತ್ತು ಮಂಡಿ ಗಚ್ಚುಗಳ ಸ್ನಾಯುಗಳನ್ನು ಚಾಚುವಂತೆ ಮಾಡುತ್ತದೆ, ಅಲ್ಲದೆ ಇದು ಹೊಟ್ಟೆ ಮತ್ತು ಶ್ರೋಣಿಯ ಅಂಗಾಂಗಗಳನ್ನು ಅಂಗಮರ್ದನ ಮಾಡುತ್ತದೆ
ಅರ್ಧಮತ್ಸ್ಯೆಂದ್ರಾಸನ
ಇದರಿಂದ ಬೆನ್ನು ಮೂಳೆ ಬಾಗುವ ಸಾಮರ್ಥ್ಯ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಇದು ಎದೆಭಾಗವನ್ನು ಹಿಗ್ಗಿಸಿ ಹೆಚ್ಚಿನ ಆಮ್ಲಜನಕದ ಸರಬರಾಜು ಶ್ವಾಸಕೋಶಗಳಿಗೆ ಆಗುವಂತೆ ಮಾಡುತ್ತದೆ.
ಯೋಗನಿದ್ರಾ
ಯೋಗನಿದ್ರೆಯನ್ನು ಅನುಭವಿಸಲು ಅಂಗಾತ ಮಲಗಿಕೊಳ್ಳಿ. ಕಣ್ಣುಗಳನ್ನು ಮುಚ್ಚಿ ದೇಹಕ್ಕೆ ಆರಾಮ ಸಿಗುತ್ತದೆ. ಎಲ್ಲಾ ಯೋಗದ ಭಂಗಿಗಳ ನಂತರ ಹೆಚ್ಚಿನ ಆರಾಮ ಸಿಕ್ಕ ಕೆಲವು ನಿಮಿಷಗಳ ಧೀರ್ಘನಿದ್ರೆಗೆ ಹೋಗುತ್ತೀರಿ.
6. ಧ್ಯಾನಕ್ಕೆ ಹೋಗುವ ಮೊದಲು ಪ್ರಾಣಾಯಾಮ ಮಾಡಿದರೆ ದೇಹ ಹಾಗು ಮನಸ್ಸಿಗೆ ಚೈತನ್ಯ ಸಿಗುತ್ತದೆ.
. "ಪ್ರಾಣಾಯಾಮ" ಎಂದರೆ "ಜೀವನದ ಬಲವನ್ನು ಹೆಚ್ಚಿಸುವಿಕೆ" ಎಂದು ಸಂಸ್ಕ್ರತದಲ್ಲಿ ಹೇಳುತ್ತಾರೆ. ಧ್ಯಾನಕ್ಕೆ ಮೊದಲು ಒಂದೆರಡು "ಪ್ರಾಣಾಯಾಮ" ಉಸಿರಿನ ವ್ಯಾಯಾಮಗಳನ್ನು ಮಾಡಿದರೆ ಅದು ದೇಹ ಮತ್ತು ಮನಸ್ಸಿಗೆ ತಂಪು ನೀಡಿ ಧ್ಯಾನಕ್ಕೆ ಸಹಕಾರಿಯಾಗುವಂತೆ ಮನಸ್ಸಿಗೆ ಮುದ ನೀಡುತ್ತದೆ.
7. ನೀವು ಧ್ಯಾನಕ್ಕೆ ಸಿದ್ಧರಾದಾಗ, ನಿಮಗೆ ಎಲ್ಲಿ ಆರಾಮವಾಗಿದೆಯೋ ಅಲ್ಲಿ ಕುಳಿತು ಧ್ಯಾನದಲ್ಲಿ ತೊಡಗಿರಿ
8. ಧ್ಯಾನದ ನಂತರ ಏಳುವ ಮೊದಲು ಕೆಲ ನಿಮಿಷಗಳು ನಿಶ್ಯಬ್ಧವಾಗಿದ್ದು ನಂತರ ದಿನದ ಚಟುವಟಿಕೆಗಳನ್ನು ಆರಂಭಿಸಿರಿ.
ಮನಸ್ಸಿನೊಳಗಿನ ಶಾಂತಿ ಮತ್ತು ಸಂತೋಷವನ್ನು ಕಾಪಾಡಲು ದಿಟ್ಟ ಹೆಜ್ಜೆಯನ್ನು ನೀವು ಇಟ್ಟಿರುವುದನ್ನು ನೆನೆಸಿಕೊಂಡು ಇಡೀ ದಿನ ನಗುತ್ತಾ ಇರಿ.
ಧ್ಯಾನದ ನಿಯಮಿತ ಅಭ್ಯಾಸದಿಂದ ಮನಸ್ಸು ಶಾಂತತೆಯನ್ನು ಹೊಂದಿ, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಹಾಗು ನಮ್ಮಲ್ಲಿನ ವಿಶ್ವಾಸವನ್ನು ವರ್ಧಿಸುತ್ತದೆ, ಆದ್ದರಿಂದ ಪ್ರತಿನಿತ್ಯ ಸ್ವಲ್ಪ ನಿಶ್ಯಬ್ಧತೆಯನ್ನು ಅನುಭವಿಸಿ, ನಿಮ್ಮಲ್ಲಿ ನಿಮ್ಮನ್ನು ವಶಮಾಡಿಕೊಳ್ಳಿ.
ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.in ನಲ್ಲಿ ಸಂಪರ್ಕಿಸಿ