ಚಕ್ರಯೋಗದೊಡನೆ ದೇಹದ ಸಮತೋಲನವನ್ನು ತಂದುಕೊಳ್ಳಿ!
ಮೂಲಾಧಾರ ಚಕ್ರ
ಸ್ವಾಧಿಷ್ಠಾನ ಚಕ್ರ
ಮಣೆಪುರ ಚಕ್ರ
ಅನಾಹತ ಚಕ್ರ
ವಿಶುದ್ಧಿ ಚಕ್ರ
ಆಜ್ಞ ಚಕ್ರ
ಸಹಸ್ರಾರ ಚಕ್ರ
ನಮ್ಮ ದೇಹದಲ್ಲಿ ಏಳು ಚಕ್ರಗಳು ಅಥವಾ ಶಕ್ತಿ ಕೇಂದ್ರ ಗಳಿವೆ. ಅವುಗಳ ಮೂಲಕ "ಪ್ರಾಣ ಶಕ್ತಿ" ಹರಿಯುತ್ತದೆ. ಈ ಚಕ್ರಗಳಲ್ಲಿ ಶಕ್ತಿಯು ಹರಿಯದೆ ನಿಂತುಬಿಟ್ಟಾಗ, ಅದರಿಂದ ಖಾಯಿಲೆಗಳು ಉಂಟಾಗುತ್ತವೆ. ಆದ್ದರಿಂದ ಪ್ರತಿಯೊಂದು ಚಕ್ರವೂ ಯಾವುದನ್ನು ಪ್ರತಿನಿಧಿಸುತ್ತದೆ ಎಂದು ಮತ್ತು ಈ ಶಕ್ತಿ ಸರಾಗವಾಗಿ ಹರಿಯಲು ಏನು ಮಾಡಬೇಕೆಂದು ತಿಳಿಯಬೇಕು.
ಶಕ್ತಿಯ ಚಕ್ರ ಸಿಲುಕಿಕೊಂಡಾಗ ಚಲನೆಯಿಂದ ಪ್ರಾಣದ ಹರಿತವನ್ನು ಸರಾಗವಾಗಿಸಬಹುದು. ದೇಹದಲ್ಲಿ ಸಿಲುಕಿಕೊಂಡಿರುವ ಶಕ್ತಿಯನ್ನು ಬಿಡುಗಡೆ ಮಾಡುವ ಉತ್ತಮವಾದ ದಾರಿಯೆಂದರೆ ಯೋಗಾಸನಗಳು. ಯೋಗಾಸನಗಳು ಮತ್ತು ಉಸಿರಾಟವು ದೇಹದೊಳಗೆ ತಾಜಾ ಆದ, ಚೈತನ್ಯಕಾರಕವಾದ ಪ್ರಾಣಶಕ್ತಿಯನ್ನು ಆಹ್ವಾನಿಸುತ್ತವೆ.
ಯೋಗಾಸನಗಳು ದೈಹಿಕವಾದ ಮತ್ತು ಆಧ್ಯಾತ್ಮಿಕ ಅಭ್ಯಾಸವೂ ಆಗಿರುವುದರಿಂದ, ಯೋಗಾಸನಗಳು ಕೇವಲ ದೇಹಕ್ಕೆ ವ್ಯಾಯಾಮವಾಗಿರದೆ, ನಿಮ್ಮ ಮನಸ್ಸಿಗೆ, ಭಾವನೆಗಳಿಗೆ ಮತ್ತು ಆತ್ಮಕ್ಕೂ ವ್ಯಾಯಾಮ ವಾಗಿರುವುದರಿಂದ, ನಿಮ್ಮ ಚಕ್ರಗಳಲ್ಲಿ ಸಮತೋಲನ ತರಲು ಇದು ಉತ್ತಮವಾದ ಅಭ್ಯಾಸ.
ಮೂಲಾಧಾರ ಚಕ್ರ
ತತ್ವ: ಭೂಮಿ/ ಬಣ್ಣ: ಕೆಂಪು/ ಮಂತ್ರ : ಲಂ
ಸ್ಥಳ: ಜನನೇಂದ್ರಿಯ ಮತ್ತು ಗುದದ್ವಾರದ ನಡುವೆ, ಬೆನ್ನೆಲುಬಿನ ಮೂಲ
ಮೂಲಾಧಾರ ಚಕ್ರವು ಮೂಳೆಗಳ, ಹಲ್ಲಿನ, ಉಗುರುಗಳ, ಗುದದ್ವಾರದ, ಪ್ರಾಸ್ಟೇಟ್ ಗ್ರಂಥಿಯ, ಅಡ್ರಿನಲ್ ಗ್ರಂಥಿಯ, ಮೂತ್ರಪಿಂಡದ, ಜೀರ್ಣ ಪ್ರಕ್ರಿಯೆಯ ಕೆಳಹಂತದ ಕಾರ್ಯಗಳ, ವಿಸರ್ಜನೆಯ ಕ್ರಿಯೆಯ ಮತ್ತು ಕಾಮದ ಚಟುವಟಿಕೆಯ ಆರೋಗ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ. ಈ ಚಕ್ರದ ಅಸಮತೋಲನದಿಂದ ದಣಿವು, ನಿದ್ರಾಹೀನತೆ, ಕೆಳಬೆನ್ನಿನ ನೋವು, ಸಿಯಾಟಿಕ, ಮಲಬದ್ಧತೆ, ರೋಗನಿರೋಧಕ ಖಾಯಿಲೆಗಳು, ಸ್ಥೂಲಕಾಯ, ಖಿನ್ನತೆ, ಮತ್ತು ತಿನ್ನುವ ಖಾಯಿಲೆಗಳು ಉಂಟಾಗುತ್ತವೆ.
ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ನೆಲೆನಿಲ್ಲಲು ಸಾಧ್ಯವಾಗದಿರುವುದು, ಕೋಪ, ಭಯ, ಕೀಳರಿಮೆ, ಅನಿಶ್ಚಿತತೆ, ಸುಖದ ಗೀಳು, ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರವೃತ್ತಿ.
ಸಮತೋಲನವುಳ್ಳ ಈ ಚಕ್ರದ ಲಕ್ಷಣಗಳು: ನೆಲೆನಿಂತಿರುವ ಭಾವ, ಕೇಂದ್ರಿಕೃತತೆ, ಬದ್ಧತೆ, ಸ್ವತಂತ್ರ ಮನೋಭಾವ, ಶಕ್ತಿಯುತವಾಗಿರುವ ಅನುಭವ, ಸತ್ವವುಳ್ಳ ಅನುಭವ, ಬಲ, ಸ್ಥಿರತೆ, ಸ್ತಬ್ಧತೆ, ಉತ್ತಮ ಪಚನ ಶಕ್ತಿ.
ಈ ಚಕ್ರದ ಸಮತೋಲನವನ್ನು ಉಂಟು ಮಾಡುವ ಯೋಗಾಸನಗಳು: ಪಾದವನ್ನು ನೆಲೆನಿಲ್ಲಿಸುವ ಆಸನಗಳಾದ ಪರ್ವತಾಸನ, ಇಬ್ಬದಿಗೆ ಬಗ್ಗುವ ಭಂಗಿ, ವೀರಭದ್ರಾಸನ, ನಿಂತು ಮುಂದಕ್ಕೆ ಬಗ್ಗುವ ಆಸನ ಮತ್ತು ಸೇತುಬಂಧಾಸನ.
ಸ್ವಾಧಿಷ್ಠಾನ ಚಕ್ರ
ತತ್ವ: ನೀರು/ ಬಣ್ಣ: ಕೇಸರಿ/ ಮಂತ್ರ: ಲಂ
ಸ್ಥಳ: ಜನನೇಂದ್ರಿಯ ಮತ್ತು ಸೇಕ್ರಲ್ ನರಗಳ ಸಮೂಹದ/ಪ್ಲೆಕ್ಸ್ ನಾ ನಡುವೆ, ಪ್ಯೂಬಿಕ್ ಮೂಳೆಯ ತಳದಲ್ಲಿ .
ಸ್ವಾಧಿಷ್ಠಾನ ಚಕ್ರವು ವ್ಯಕ್ತಿಯ ಭಾವನಾತ್ಮಕ ಗುರುತಿನೊಡನೆ, ಸೃಜನಶೀಲತೆಯೊಡನೆ, ಬಯಕೆಯೊಡನೆ, ಸುಖದೊಡನೆ, ಗೀಳನ್ನು ಪೂರೈಸಿಕೊಳ್ಳುವುದರಲ್ಲಿ, ಜನನ ನೀಡುವ ಆಸಕ್ತಿ ಮತ್ತು ವೈಯಕ್ತಿಕ ಸಂಬಂಧದೊಡನೆ ಸಂಬಂಧಪಟ್ಟಿದೆ. ಈ ಚಕ್ರವು ಜನನೇಂದ್ರಿಯಗಳನ್ನು, ಹೊಟ್ಟೆಯನ್ನು, ಕರುಳಿನ ಮೇಲ್ಭಾಗದ ಕಾರ್ಯ ನನ್ನು, ಖಲಿಜವನ್ನು, ಪಿತ್ತಜನಕಾಂಗವನ್ನು, ಮೂತ್ರಪಿಂಡವನ್ನು, ಪ್ಯಾಂಕ್ರಿಯಅನ್ನು, ಅಡ್ರಿನಲ್ ಗ್ರಂಥಿಯನ್ನು, ಸ್ಪ್ಲೀನ್ ಅನ್ನು, ಬೆನ್ನುಮೂಳೆಯ ಮಧ್ಯಭಾಗ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಆಳುತ್ತದೆ. ಅಸಮತೋಲನವುಳ್ಳ ಸ್ವಾಧಿಷ್ಠಾನ ಚಕ್ರದಿಂದ ಕೆಳಬೆನ್ನ ನೋವು, ಸಿಯಾಟಿಕ, ಕುಗ್ಗಿದ ಕಾಮದ ಶಕ್ತಿ, ಕೆಳಹೊಟ್ಟೆಯ ನೋವು, ಮೂತ್ರದ ಸಮಸ್ಯೆ, ಕುಗ್ಗಿದ ಪಚನ ಕ್ರಿಯೆ, ವೈರಾಣುಗಳ ಮತ್ತು ಸೋಂಕಿನ ನಿರೋಧಕ ಶಕ್ತಿಯ ಕುಗ್ಗುವಿಕೆ, ದಣಿವು, ಹಾರ್ಮೋನುಗಳ ಅಸಮತೋಲನ ಮತ್ತು ಋತುಸ್ರಾವದ ಸಮಸ್ಯೆಗಳು ಉಂಟಾಗುತ್ತವೆ.
ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ಕಿರಿಕಿರಿತನ, ನಾಚಿಕೆ, ಅಪರಾಧಿ ಭಾವ, ದೂಷಣೆ, ಕಾಮದ ಗೀಳು, ಸೃಜನಶೀಲತೆಯ ಅಭಾವ.
ಸಮತೋಲನವುಳ್ಳ ಚಕ್ರದ ಲಕ್ಷಣಗಳು: ಕರುಣೆ ಮತ್ತು ಸ್ನೇಹಶೀಲ,ತೆ, ಅಂತಂಸ್ಫರಣೆ, ಸತ್ವ, ಸ್ವಕೀಯ ಭಾವ ಮತ್ತು ಹಾಸ್ಯಪ್ರಜ್ಞೆ.
ಚಕ್ರದ ಸಮತೋಲನವನ್ನು ಉಂಟುಮಾಡುವ ಆಸನಗಳು: ಸೊಂಟವನ್ನು ತೆರೆಯುವ ಭಂಗಿಗಳಾದ ಅಗಲವಾಗಿ ನಿಂತು ಮುಂದಕ್ಕೆ ಬಗ್ಗುವ ಭಂಗಿ, ಅಗಲವಾಗಿ ಕುಳಿತು ಮುಂದಕ್ಕೆ ಬಗ್ಗುವ ಭಂಗಿ, ಬದ್ಧಕೋನಾಸನ.
ಮಣಿಪುರ ಚಕ್ರ
ತತ್ವ: ಬೆಂಕಿ/ ಬಣ್ಣ: ಹಳದಿ/ಮಂತ್ರ: ರಂ
ಸ್ಥಳ: ಹೊಕ್ಕುಳ ಹಂತದಲ್ಲಿ, ಸೋಲಾರ್ ಪ್ಲೆಕ್ಸೆಸ್ ನ ಬಳಿ
ಮಣಿಪುರ ಚಕ್ರವು ಸ್ವಕೀಯ ಭಾವದೊಡನೆ, ಭಾವನೆಗಳ ತಿಳಿವಳಿಕೆಯೊಡನೆ, ವ್ಯಕ್ತ್ತಿಯ ಸ್ವಪ್ರತಿಷ್ಠೆಯೊಡನೆ ಸಂಬಂಧಪಟ್ಟಿದೆ. ಹೊಟ್ಟೆಯ ಮೇಲ್ಭಾಗ, ಪಿತ್ತಕೋಶ, ಖಾಲಿಜ, ಬೆನ್ನೆಲುಬಿನ ಮಧ್ಯಭಾಗ, ಮೂತ್ರಪಿಂಡ, ಅಡ್ರೀನಲ್ ಗ್ರಂಥಿ, ಸಣ್ಣ ಕರುಳು ಮತ್ತು ಹೊಟ್ಟೆಯನ್ನು ಈ ಚಕ್ರ ಆಳುತ್ತದೆ. ಮಣಿಪುರ ಚಕ್ರದ ಅಸಮತೋಲನದಿಂದ ಮಧುಮೇಹ, ಪ್ಯಾಂಕ್ರಿಯಾಟಿಟಿಸ್, ಅಡ್ರಿನಲ್ ಗ್ರಂಥಿಯ ಅಸಮತೋಲನ, ಸಂಧಿನೋವು, ಕರುಳಿನ ಖಾಯಿಲೆಗಳು, ಹೊಟ್ಟೆಯ ಹುಣ್ಣುಗಳು, ಕರುಳಿನ ಟ್ಯೂಮರ್ ಗಳು, ಹಸಿವಾಗದಿರುವುದು, ಬುಲೀಮಿಯ , ಕಡಿಮೆ ರಕ್ತದೊತ್ತಡ ಉಂಟಾಗುತ್ತವೆ.
ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ಸ್ವಪ್ರತಿಷ್ಠೆಯ ಅಭಾವ, ಹೆದರಿಕೆ, ಖಿನ್ನತೆ, ತಿರಸ್ಕಾರದ ಭಯ, ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥರು, ತೀರ್ಪು ನೀಡುತ್ತಿರುತ್ತಾರೆ, ಕೋಪ, ದ್ವೇಷ.
ಸಮತೋಲನವುಳ್ಳ ಚಕ್ರದ ಲಕ್ಷಣಗಳು: ಶಕ್ತಿಯುತರಾಗಿರುವುದು, ವಿಶ್ವಾಸ, ಬುದ್ಧಿವಂತಿಕೆ, ಉತ್ಪಾದನೆ ಹೆಚ್ಚು, ಏಕಾಗ್ರತೆ, ಒಳ್ಳೆಯ ಜೀರ್ಣಶಕ್ತಿ.
ಚಕ್ರದಲ್ಲಿ ಸಮತೋಲನ ತರುವ ಯೋಗಾಸನಗಳು: ತಾಪವನ್ನು ಹೆಚ್ಚಿಸುವಂತಹ ಆಸನಗಳಾದ ಸೂರ್ಯನಮಸ್ಕಾರ, ವೀರಭದ್ರಾಸನ, ಹಿಂದಕ್ಕೆ ಬಗ್ಗುವ ಆಸನಗಳಾದ ಧನುರಾಸನ, ಕುಳಿತು ತಿರುಚುವ ಆಸನಗಳಾದ ಅರ್ಧಮತ್ಸ್ಯೆಂದ್ರಿಯಾಸನ, ಹೊಟ್ಟೆಯ ಸ್ನಾಯುಗಳನ್ನು ಬಲಿಷ್ಠವಾಗಿಸುವ ನೌಕಾಸನ.
ಅನಾಹುತ ಚಕ್ರ
ತತ್ವ: ವಾಯು/ ಬಣ್ಣ: ಹಸಿರು ಅಥವಾ ಗುಲಾಬಿ/ ಮಂತ್ರ: ಯಂ
ಸ್ಥಳ: ಹೃದಯದ ಭಾಗದಲ್ಲಿ
ಅನಾಹುತ ಚಕ್ರವು ವ್ಯಕ್ತಿಯ ಸಾಮಾಜಿಕ ಗುರುತಿನ ಮೇಲೆ
ಪ್ರಭಾವ ಬೀರುತ್ತದೆ, ವಿಶ್ವಾಸ, ಕ್ಷಮೆ, ನಿಯಮರಹಿತ ಪ್ರೇಮ, ಜ್ಞಾನ, ಕರುಣೆ, ಮತ್ತು ಆತ್ಮದ ಸಮಸ್ಯೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಚಕ್ರವು ಹೃದಯದ, ಎದೆಗೂಡಿನ, ರಕ್ತದ, ರಕ್ತಚಲನೆಯ, ಶ್ವಾಸಕೋಶದ, ಡಯಾಫ್ರಂನ ಥೈಮಸ್ ಗ್ರಂಥಿಯ, ಸ್ತನಗಳ, ಅನ್ನನಾಳದ, ಭುಜಗಳ, ಕೈಗಳು, ತೋಳುಗಳು ಕಾರ್ಯದ ಮೇಲೆ ಪ್ರಭಾವ ಬೀರುತ್ತದೆ. ಈ ಚಕ್ರದ ಅಸಮತೋಲನದಿಂದ ಎದೆಗೂಡಿನ ಭಾಗದ ಬೆನ್ನೆಲುಬಿನ ಸಮಸ್ಯೆಯನ್ನು, ಬೆನ್ನಿನ ಮೇಲ್ಭಾಗದ ಮತ್ತು ಭುಜಗಳ ಸಮಸ್ಯೆಗಳನ್ವು, ಆಸ್ತಮ ಖಾಯಿಲೆಯನ್ನು, ಹೃದಯದ ಸಮಸ್ಯೆಗಳನ್ನು, ಮೇಲು ಮೇಲಿನ ಉಸಿರಾಟವನ್ನು ಮತ್ತು ಶ್ವಾಸಕೋಶದ ಖಾಯಿಲೆಗಳನ್ನು ಉಂಟಾಗುತ್ತವೆ.
ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ಪ್ರೀತಿಸಲು ಕಷ್ಟ, ನಿರಾಶಾಭಾವನೆ, ಕರುಣೆಯ, ವಿಶ್ವಾಸದ ಅಭಾವ, ಸಂಕಷ್ಟ ದಿಲ್ಲಿ ಸಿಲುಕಿರುವ ಭಾವನೆ ಮತ್ತು ಭಾವನೆಗಳ ಏರುಪೇರು.
ಸಮತೋಲನವುಳ್ಳ ಚಕ್ರದ ಲಕ್ಷಣಗಳು: ಪೂರ್ಣತೆಯ ಭಾವ, ಕರುಣೆ, ಸ್ನೇಹಶೀಲತೆ, ಆಶಾಭಾವನೆ, ಸ್ಫೂರ್ತಿ ದಾಯಕರಾದವರು ಮತ್ತು ತೆರೆದ ಮನಸ್ಸುಳ್ಳವರು.
ಈ ಚಕ್ರದ ಸಮತೋಲನವನ್ನು ಉಂಟು ಮಾಡುವ ಯೋಗಾಸನಗಳು: ಎದೆಯನ್ನು ತೆರೆಯುವ ಆಸನಗಳಾದ ಉಷ್ಠ್ರಾಸನ, ಭುಜಂಗಾಸನ, ಮತ್ಸ್ಯಾಸನ, ನಾಡಿಶೋಧನ ಪ್ರಾಣಾಯಾಮ ಅಥವಾ ಕಫಾಲಭಾತ್ತಿಯಂತಹ ಪ್ರಾಣಾಯಾಮ.
ವಿಶುದ್ಧಿ ಚಕ್ರ
ತತ್ವ: ಶಬ್ದ ಅಥವಾ ಆಕಾಶ/ ಬಣ್ಣ: ನೀಲಿ/ ಮಂತ್ರ: ಹಂ
ಸ್ಥಳ: ಗಂಟಲಿನ ಹಂತದಲ್ಲಿ, ಧ್ವನಿ ಪೆಟ್ಟಿಗೆಯ ನರಗಳ ಬಳಿ
ವಿಶುದ್ಧಿ ಚಕ್ರವು ಸಂಪರ್ಕ, ಸೃಜನಶೀಲತೆ, ವಿಶ್ವಾಸ, ಸತ್ಯಪರತೆ, ಸ್ವ ಅರಿವು, ಅಭಿವ್ಯಕ್ತಿಯೊಡನೆ ಸಂಬಂಧಪಟ್ಟಿದೆ. ಈ ಚಕ್ರವು ಗಂಟಲನ್ನು, ಥೈರಾಯ್ಡ್ ಗ್ರಂಥಿಯನ್ನು, ಪ್ಯಾರಾಥೈರಾಯ್ಡ್ ಗ್ರಂಥಿಯನ್ನು, ಧ್ವನಿ ಪೆಟ್ಟಿಗೆಯನ್ನು, ಗಂಟಲಿನ ಭಾಗದ ಬೆನ್ನೆಲುಬನ್ನು, ಕತ್ತನ್ನು, ಭುಜಗಳನ್ನು, ತೋಳುಗಳನ್ನು, ಅನ್ನನಾಳ ನನ್ನು, ಬಾಯನ್ನು, ಹುಲ್ಲನ್ನು, ಮತ್ತು ವಸ್ತುಗಳನ್ನು ಆಳುತ್ತದೆ.
ಈ ಚಕ್ರದ ಅಸಮತೋಲನದಿಂದ ಥೈರಾಯ್ಡ್ ಗ್ರಂಥಿಯ ಖಾಯಿಲೆಗಳು, ಕಟ್ಟಿದ ಗಂಟಲು, ಬಿಗಿಯಾದ ಕಿತ್ತು, ಬಾಯಿಯ ಹುಣ್ಣು, ವಸುಡಿನ ಅಥವಾ ಹಲ್ಲಿನ ಸಮಸ್ಯೆಗಳು, ಲ್ಯಾರಿಂಜೈಟಿಸ್, ಕೆಳಿಸಿಕೊಳ್ಳುವ ಸಮಸ್ಯೆಗಳು, ಇತ್ಯಾದಿ ಉಂಟಾಗುತ್ತವೆ.
ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ಅಲುಗಾಡಿದ ವಿಶ್ವಾಸ, ನಿರ್ಧರಿಸುವ ಅಸಮರ್ಥತತೆ, ಕೃಶವಾದ ಇಚ್ಛಾಶಕ್ತಿ, ಅಭಿವ್ಯಕ್ತಿಯ ಅಸಮರ್ಥತತೆ, ಸೃಜನಶೀಲತೆಯ ಅಭಾವ, ವ್ಯಸನಗಳ ಚೀಟಿ.
ಸಮತೋಲನವುಳ್ಳ ಚಕ್ರದ ಲಕ್ಷಣಗಳು: ಸೃಜನಶೀಲತೆ, ಒಳ್ಳೆಯ ಅಭಿವ್ಯಕ್ತಿ, ಉತ್ತಮ ಸಂಪರ್ಕದ ಕುಶಲತೆ, ತೃಪ್ತಿ, ಒಳ್ಳೆಯ ಕೇಳುಗರು.
ಈ ಚಕ್ರದ ಸಮತೋಲನವನ್ನು ಉಂಟು ಮಾಡುವ ಯೋಗಾಸನಗಳು: ಮತ್ಸ್ಯಾಸನ, ಮಾರ್ಜಾಲಾಸನ, ಕತ್ತಿನ ವಿಸ್ತರಣೆ, ಆಧಾರಸಹಿತ ಭುಜಗಳ ಸ್ಟಾಂಡ್, ಸೇತುಬಂಧಾಸನ ಮತ್ತು ಹಲಾಸನ.
ಆಜ್ಞ ಚಕ್ರ
ತತ್ವ: ಬೆಳಕು/ ಬಣ್ಣ: ಇಂಡಿಗೊ ನೀಲಿ / ಮಂತ್ರ: ಓಂ
ಸ್ಥಳ: ಭ್ರೂಗಳ ಮಧ್ಯೆ , ಮೂರನೆಯ ಕಣ್ಣು
ಆಜ್ಞ ಚಕ್ರವು ಸ್ವ ಅರಿವಿನೊಂದಿಗೆ, ಜ್ಞಾನದೊಡನೆ, ಬುದ್ಧಿಯೊಡನೆ, ಅಂತಸ್ಫುರಣೆಯೊಡನೆ, ಯೋಜನೆಗಳನ್ನು ಜಾರಿಗೆ ತರುವ ಸಾಮರ್ಥ್ಯದೊಡನೆ, ನಿರ್ಮೋಹತ್ವದೊಡನೆ, ಒಳನೋಟದೊಡನೆ, ತಿಳಿವಳಿಕೆಯೊಡನೆ, ಅಂತಸ್ಫುರಣೆಯೊಡನೆ ಸಂಬಂಧಪಟ್ಟ ವೈಚಾರಿಕತೆಯೊಡನೆ ಸಂಬಂಧಪಟ್ಟಿದೆ. ಈ ಚಕ್ರವು ಮೆದುಳನ್ನು, ಕಿವಿಗಳನ್ನು, ಕಣ್ಣುಗಳನ್ನು, ಮೂಗನ್ನು, ಪಿಟ್ಯೂಟರಿ ಗ್ರಂಥಿಯನ್ನು, ಪೀನಿಯಲ್ ಗ್ರಂಥಿಯನ್ನು ಮತ್ತು ನರವ್ಯವಸ್ಥೆಯನ್ನು ಆಳುತ್ತದೆ. ಈ ಚಕ್ರದ ಅಸಮತೋಲನದಿಂದ ತಲೆನೋವು, ಭೀಕರ ಸ್ವಪ್ನಗಳು, ಕಣ್ಣಿನ ಒತ್ತಡ, ಕಲಿಕೆಯ ಅಸಾಮರ್ಥ್ಯ, ಗಾಬರಿ, ಖಿನ್ನತೆ, ಅಂಧತ್ವ, ಕಿವುಡುತನ, ಮೂರ್ಛೆ ರೋಗ , ಬೆನ್ನೆಲುಬಾಗಿರುವ ಸಮಸ್ಯೆಗಳು ಉಂಟಾಗುತ್ತವೆ.
ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ತೀರ್ಪನ್ನು ತೆಗೆದುಕೊಳ್ಳುವ ಅಸಮರ್ಥತೆ, ಗೊಂದಲ, ಸತ್ಯದ ಭಯ, ಅಶಿಸ್ತು ಮತ್ತು ಗಮನ ನೀಡುವ ಸಮಸ್ಯೆ.
ಈ ಚಕ್ರದ ಸಮತೋಲನದ ಲಕ್ಷಣಗಳು: ಸ್ಪಷ್ಟವಾದ ತಿಳಿವಳಿಕೆ, ಆರೋಗ್ಯಕರವಾದ ಕಲ್ಪನೆ, ಬಲವಾದ ಅಂತಸ್ಫುರಣಾ ಸಾಮರ್ಥ್ಯ, ಹೆಚ್ಚಿನ ಏಕಾಗ್ರತೆ.
ಈ ಚಕ್ರದ ಸಮತೋಲನವನ್ನು ಉಂಟು ಮಾಡುವ ಯೋಗಾಸನಗಳು: ಮಗುವಿನ ಭಂಗಿ, ಧ್ಯಾನ, ಕುಳಿತು ಯೋಗಮುದ್ರ, ಕಣ್ಣುಗಳನ್ನು ಮತ್ತು ಕಣ್ಣಿನ ಸುತ್ತಲಿನ ಭಾಗವನ್ನು ಹಸ್ತಗಳಿಂದ ತೀಡುವುದು.
ಸಹಸ್ರಾರ ಚಕ್ರ
ತತ್ವ: ಚೈತನ್ಯ/ ಬಣ್ಣ: ಬಿಳಿ ಅಥವಾ ನೇರಳೆ/ಮಂತ್ರ: ಮೌನ
ಸ್ಥಳ: ತಲೆಯ ಮೇಲ್ಭಾಗ.
ಸಹಸ್ರಾರ ಚಕ್ರವು ಅಂತಸ್ಫುರಣೆಯಿಂದ ಕೂಡಿದ ತಿಳಿವಳಿಕೆಯ ಮೇಲೆ, ಆಧ್ಯಾತ್ಮಿಕತೆಯೊಡನೆ ಸಂಬಂಧದ ಮೇಲೆ, ಮನಸು-ದೇಹ-ಆತ್ಮದೊಡನೆ ಮತ್ತು ಪ್ರಜ್ಞಾಪೂರ್ವಕವಾದ ಅರಾವಿನೊಡನೆ ಸಂಬಂಧಪಟ್ಟಿದೆ. ಈ ಚಕ್ರವು ತಲೆಯ ಕೇಂದ್ರ ಭಾಗವನ್ನು, ಕಿವಿಗಳ ಮೇಲಿರುವ ಮಧ್ಯಭಾಗವನ್ನು, ಮೆದುಳನ್ನು, ನರವ್ಯವಸ್ಥೆಯನ್ನು, ಪೀನಿಯಲ್ ಗ್ರಂಥಿಯನ್ನು ಆಳುತ್ತದೆ. ಸಹಸ್ರಾರ ಚಕ್ರದ ಅಸಮತೋಲನದಿಂದ ದೀರ್ಘ ಕಾಲೀನ ದಣಿವು, ಬೆಳಕು ಹಾಗೂ ಶಬ್ದಕ್ಕೆ ಹೆಚ್ಚು ಸೂಕ್ಷ್ಮ ತೆ ಉಂಟಾಗುತ್ತವೆ.
ಈ ಚಕ್ರದ ಅಸಮತೋಲನದಿಂದ ಉಂಟಾಗುವ ವರ್ತನೆಯ ಮಾರ್ಪಾಟು: ಗುರಿಯ ಅಭಾವ, ಗುರುತಿನ ಸಮಸ್ಯೆ, ಯಾವುದೇ ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಅಪನಂಬಿಕೆ, ಭಕ್ತಿಯ ಅಭಾವ , ಸ್ಫೂರ್ತಿಯ ಅಭಾವ, ಭಯ, ಜಗತ್ತಿನ ವಿಷಯಗಳಲ್ಲಿ ಅನುರಕ್ತಿ.
ಈ ಚಕ್ರದ ಸಮತೋಲನದ ಲಕ್ಷಣಗಳು: ವಿಶ್ವಾಸದೊಂದಿಗೆ ಒಂದಾಗಿರುವ ಭಾವನೆ, ತೆರೆದ ಮನಸ್ಸು, ಬುದ್ಧಿವಂತಿಕೆ, ಆಲೋಚನಾ ಪೂರ್ವಕವಾಗಿ ಕಾರ್ಯಾಚರಣೆ, , ಇತರರು ಯೋಜನೆಗಳಿಗೆ, ಆಲೋಚನೆಗಳಿಗೆ ಸ್ಪಂದನೆ, ಸಾಮರಸ್ಯ ಮಯವಾದ ವ್ಯಕ್ತಿತ್ವ.
ಈ ಚಕ್ರದ ಸಮತೋಲನವನ್ನುಂಟು ಮಾಡುವ ಆಸನಗಳು: ದೇಹಕ್ಕೆ ಅರಿವನ್ನು ತರುವಂತಹ ಸಮತೋಲನದ ಭಂಗಿಗಳು, ಯೋಗಮುದ್ರೆಯಲ್ಲಿ ಕುಳಿತುಕೊಳ್ಳುವುದು ಮತ್ತು ಧ್ಯಾನ.