“ನಾನು ಶಾಲೆಗೆ ಹೋಗುವ ಹುಡುಗನಾಗಿದ್ದ ಆರ್ನೊಲ್ಡ್ ಶ್ವಾಜೆನೆಗ್ಗರ್ನ ಪಂಪಿಂಗ್ ಐರನ್ ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದ ನೆನಪಿದೆ. ಆತನ ಸ್ನಾಯುಗಳ ಗಾತ್ರವನ್ನು ಕಂಡು, ಆ ರೀತಿಯ ಅಜಾನುಬಾಹುಗಳನ್ನು ಮತ್ತು ಭುಜಗಳನ್ನು ಹೊಂದಲು ಮಾನವ ಪ್ರಯತ್ನದಿಂದ ಸಾಧ್ಯವೇ ಅನಿಸುತ್ತಿತ್ತು. ಅದಾದ ನಂತರ ಅನೇಕ ವರ್ಷಗಳನ್ನು ಸ್ಥಳೀಯ ಜಿಮ್ನಲ್ಲಿ ಒಳ್ಳೆಯ ಕೆತ್ತಿದ್ದಂತಹ ದೇಹದ ರೂಪವನ್ನು ಪಡೆಯಲು ಯತ್ನಿಸಿದೆ. ಶಾಲೆಯ ಕಕ್ಷೆಯಿಂದ ಕೆಲಸದ ಸ್ಥಳಕ್ಕೆ ಜೀವನದ ಪರಿವರ್ತನೆಯಾದಾಗ ಕೆತ್ತಿದ ದೇಹದ ಅರ್ಥದಲ್ಲೂ ಬದಲಾವಣೆಯಾಯಿತು. ಆಗ ಉಳಿದಿದ್ದ ಮಹತ್ವಾಕಾಂಕ್ಷೆಯೆಂದರೆ ಹೊಟ್ಟೆಯು ಮುಂದಕ್ಕೆ ಬರದಂತೆ ತಡೆಯುವುದೇ ಆಗಿತ್ತು. ನನ್ನ ತೋಳುಗಳು ಎಂದಿಗೂ ಅಷ್ಟು ಬಲಿಷ್ಟವಾಗಿ ಆಗಲೇ ಇಲ್ಲ ಮತ್ತು ಪುಲ್ ಅಪ್ಗಳನ್ನು ಮತ್ತು ಪುಶ್ ಅಪ್ಗಳನ್ನು ಮಾಡುವುದು ಸದಾ ನನಗೊಂದು ಸಮಸ್ಯೆಯಾಗಿತ್ತು. ಭಾರವಾದ ತೂಕವನ್ನು ಎತ್ತಲು ಮತ್ತು ಭಾರವಾದ ತೂಕವನ್ನು ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಾಗದೆ ನನಗೆ ಮುಜುಗರವಾಗತೊಡಗಿತು. ಕೆಲಸದಲ್ಲಿ ಬಹಳ ಕಾರ್ಯನಿರತವಾಗಿರುವುದರಿಂದ ನನಗೆ ಈಗ ಜಿಮ್ ಹೋಗಲು ಮನಸ್ಸಾಗುವುದೇ ಇಲ್ಲ” ಎನ್ನುತ್ತಾರೆ ಬೆಂಗಳೂರಿನ ಬ್ಲಾಗರರಾದ ಅನೀಶ್.
ನಮ್ಮಲ್ಲಿ ಅನೇಕರಿಗೆ ಬಲಿಷ್ಟವಾದ ತೋಳುಗಳನ್ನು ಹೊಂದುವ ಅಥವಾ ಚಪ್ಪಟೆಯಾದ ಹೊಟ್ಟೆಯನ್ನು ಹೊಂದುವ ಅಥವಾ ಸದೃಢಕಾಯವಾದ ಶರೀರವನ್ನು ಹೊಂದುವ ಬಯಕೆಯಿರುತ್ತದೆ. ಆದರೆ ಜಿಮ್ನಲ್ಲಿ ಒಂದು ಗಂಟೆಯ ಕಾಲ ಕಳೆಯುವಷ್ಟು ಸಮಯ, ನಮ್ಮ ದಿನನಿತ್ಯದ ಕಾರ್ಯನಿರತವಾದ ಜೀವನದಲ್ಲಿ ಸಿಗುವುದೇ ಇಲ್ಲ. ಹಾಗಿದ್ದರೆ ನಮ್ಮ ಗುರಿಯ ಬಳಿಗೆ ಹೇಗೆ ತಲುಪುವುದು? ನಿಮಗೆಂದು 20 ನಿಮಿಷಗಳ ಕಾಲ ತೆಗೆದುಕೊಂಡು ಯೋಗವನ್ನು ಮಾಡಲು ಸಿದ್ಧರಾಗಿದ್ದರೆ ನಿಮಗೆ ಅದ್ಭುತಗಳಾಗಲು ಪ್ರಾರಂಭವಾಗುತ್ತದೆ.
ಬಲಿಷ್ಟವಾದ ತೋಳುಗಳನ್ನು ಪಡೆಯಲು ಕೆಳಗಿನ ಯೋಗಾಸನಗಳನ್ನು ಮಾಡಿ:
1. ತ್ರಿಕೋನಾಸನ
ತ್ರಿಕೋನಾಸನದಿಂದ ಕಾಲುಗಳ, ಎದೆಯ, ಸೊಂಟದ, ಬೆನ್ನೆಲುಬಿನ ವಿಸ್ತರಣವಾಗುವುದಲ್ಲದೆ ಅವುಗಳನ್ನು ಬಲಿಷ್ಟವಾಗಿಸುತ್ತದೆ.
2.ಪೂರ್ವೋತ್ತನಾಸನ
ತ್ರಿಕೋನಾಸನದಿಂದ ಕಾಲುಗಳ, ಎದೆಯ, ಸೊಂಟದ, ಬೆನ್ನೆಲುಬಿನ ಹಿಗ್ಗುವುದಲ್ಲದೆ ಅವುಗಳನ್ನು ಬಲಿಷ್ಟವಾಗಿಸುತ್ತದೆ.
3. ವಿಪರೀತ ಶಲಭಾಸನ
ವಿಪರೀತ ಶಲಭಾಸನವು ಎದೆಯ, ಭುಜಗಳ, ತೋಳುಗಳ ಮತ್ತು ಕೆಳಬೆನ್ನಿನ ಸ್ನಾಯುಗಳ ವಿಸ್ತರಣವನ್ನು ಮಾಡುವುದರೊಡನೆ ಅವುಗಳನ್ನು ಬಲಿಷ್ಟವಾಗಿಸುತ್ತದೆ.
4. ಭುಜಂಗಾಸನ
ಭುಜಂಗಾಸನವು ಭುಜಗಳನ್ನು, ಕತ್ತನ್ನು ತೆರೆಯುವುದಲ್ಲದೆ, ತೋಳುಗಳನ್ನು, ಭುಜಗಳನ್ನು ಬಲಿಷ್ಟವಾಗಿಸುತ್ತದೆ.
5.ಅದೋಮುಖ ಶ್ವಾನಾಸನ
ಅಧೋಮುಖವಾಗಿ ಮಾಡುವ ಶ್ವಾನಾಸನದಿಂದ ದೇಹವು ಶಕ್ತಿಯುತವಾಗುವುದಲ್ಲದೆ, ಭುಜಗಳನ್ನು ಮತ್ತು ತೋಳುಗಳನ್ನು ಬಲಿಷ್ಟವಾಗಿಸುತ್ತದೆ.
6. ಶಲಭಾಸನ
ಶಲಭಾಸನವು ಬೆನ್ನಿನ ನಮ್ಯತೆಯನ್ನು ಹೆಚ್ಚಿಸಿ ಭುಜಗಳನ್ನು, ತೋಳುಗಳನ್ನು ಬಲಿಷ್ಟಗೊಳಿಸುತ್ತದೆ..
ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.in ನಲ್ಲಿ ಸಂಪರ್ಕಿಸಿ.